ಇಷ್ಟೆಲ್ಲಾ ಇದೆ ..

Sunday, August 4, 2013

in Bangalore..!..


                                       I have observed these things in Bangalore ..

1. Sometimes, if you speak proper Kannada ,the BMTC bus conductors offers you Discount prices on Bus fare..
2. So called IT -BT people (most of the people),who spends much money like anything in Big big malls ,bargains so cheaply with poor people in the market while buying Vegetables and fruits.
3. Bangalore can be 'the capital of India' because you find the people from almost all the states in India.
4. as per me, the real saviors of 'Kannada language' in Bangalore are
" Auto Drivers "

Monday, July 29, 2013

ಪ್ರೀತಿಯ ಹಕ್ಕಿ..!



  ಪ್ರೀತಿಯ ಹಕ್ಕಿ
ಮರಳಿ ಬಂದಿದೆ ಪ್ರೀತಿಯ ಹಕ್ಕಿ
ನನ್ನ ಹೃದಯದ ಗೂಡಿಗೆ..
ಹೊಸದೊಂದು ಅರ್ಥ ಬಂದಿದೆ
ಈ ಬಡ ಜೀವ ಬದುಕಿಗೆ ..

Sunday, July 21, 2013

A poem on week end !


ನೋಡಿದರೆ ಈಗ ನೀನು
ನನ್ನನ್ನು ಕೊಲ್ಲುವ ರೀತಿ
ಹೆಚ್ಚುವುದು ನನ್ನಲ್ಲಿ
ನಿನ್ನನ್ನು ಗೆಲ್ಲುವ ಪ್ರೀತಿ..

 ಹರಿಬಿಡು ಆ ನಗುವನ್ನು
ಪ್ರತಿ ಕ್ಷಣವೂ  ಸಹಿತ..
ಅದನ್ನೇ ನಂಬಿದೆ ನನ್ನ
ಈ ಹೃದಯದ ಏರಿಳಿತ..

ಬಿಡುಗಡೆ ಆಗಲಿದೆ
ನಿನಗೆಂದೇ  ನಾ ಬರೆದ ಹೊತ್ತಿಗೆ
ನಿನ್ನದೇ  ಸಹಿ ಇದೆ
ಪ್ರತಿ ಪುಟದ ಕೊನೆಗೆ  ..
..
ಪ್ರತಿಯೊಂದು ಸಾಲುಗಳು ನೀಡಿವೆ
ನಮ್ಮ ಪ್ರೀತಿಯ ವಿಶ್ಲೇಷಣೆ .
ಹಾಕುತಿವೆ ನನ್ನ ಕನಸುಗಳು

ನಿನ್ನ ಹೃದಯಕ್ಕೆ ಪ್ರದಕ್ಷಿಣೆ ..

Friday, July 19, 2013

ಅಮ್ಮನ ಅಡುಗೆ ..!






ಎಷ್ಟೇ ಸುತ್ತಿದರೂ KFC, Domino's, Pizza Corner ಗೆ
ನಿಜವಾದ ಅಮೃತ - ಅಮ್ಮನ ಅಡುಗೆ ..!





ಬಯಕೆ


ಬಯಕೆ 

ದಿನವೂ ಬೀಳಬೇಕು ನನಗೆ
ಬರಿ ನಿನ್ನದೇ  ಕನಸು
ಸ್ವಪ್ನದಲ್ಲಿಯು ನಿನ್ನ
ನಗುವಿನ ನದಿಯನ್ನೇ ಹರಿಸು

ನಿನ್ನ ಪುಟ್ಟ ಹೃದಯದಿ ಬರಲು
ನನಗೆ ಆಹ್ವಾನ ಕಳುಹಿಸು
ಮಾತನಾಡದೇ ಎಲ್ಲಾ ಹೇಳುವ
ನಿನ್ನ ಮೌನ ನನಗೂ ಕಲಿಸು..

ನನ್ನನ್ನು ಪ್ರೀತಿಸುವ ಮುನ್ನ
ನೂರು ಬಾರಿ ನೀ ಯೋಚಿಸು
ಪ್ರತಿ ಯೋಚನೆಯಲ್ಲೂ
ನನ್ನ ಹೆಸರನ್ನೇ ನೀ ನೆನೆಸು ..

ನಿನ್ನ ತೋಳ ಸೆರಮನೆಯಲ್ಲಿ
ನನ್ನನ್ನು ನೀನು ಬಂಧಿಸು
ಕಾಡುವ ನಿನ್ನ ನೆನಪುಗಳಿಂದ
ನನ್ನನ್ನು ನೀನೇ ಉಳಿಸು


Wednesday, July 17, 2013

ಹೃದಯದ ಮಾತು


ಹೃದಯದ ಮಾತು 

ಬಾಳದುದ್ದಕ್ಕೂ ನೂರಾರು ದಾರಿ 
ಸರಿ ದಾರಿ ಹಿಡಿದು ನೀನಾಗು ಮಾದರಿ..

ಏನೇ ಮರೆತರೂ ಮಾನವೀಯತೆ ಮರೆಯದಿರು 
ಸಹಿಸದಿರು ಅನ್ಯಾಯ ನಿನ್ನ ಕಣ್ಣೆದುರು..

ಭೋಗಕ್ಕಾಗಿ ಮರೆಯದಿರು ನಿನ್ನ ಅಂತರಾತ್ಮ 
ನೀ ಮಾಡುವ ಸತ್ಕಾರ್ಯಕ್ಕೆ ಮೆಚ್ಚಬೇಕು ಆ ಪರಮಾತ್ಮ 

ನಿನ್ನ ನಿಲುವಿಗೆ ಸಿಗದಿದ್ದರೂ ಬೆಂಬಲ
ಬಿಡದಿರು ಎಂದಿಗೂ ಸಾಧಿಸಬೇಕೆಂಬ ಹಂಬಲ 

ಮಾಡದಿರು ಏನನ್ನೂ ಮನಸಾಕ್ಷಿ ವಿರುದ್ದ 
ಪ್ರಾಮಾಣಿಕ ಪ್ರಯತ್ನಕ್ಕೆ  ನೀನಾಗು ಬದ್ಧ 

ನೀ ಸೋತಾಗ ಕೇಳಿಬರುವುದು ನೂರಾರು ಕೂಗು 
ಪ್ರಯತ್ನವನ್ನು ಎಂದಿಗೂ ನಿಲ್ಲಿಸದೆ  ಮುಂದೆ ಸಾಗು 

ಸೋಲಿನ ಪ್ರತಿ ಗಳಿಗೆಯಲ್ಲೂ ಉದಯೊನ್ಮುಖಿಯಾಗು 
ದುಡ್ಡಿಗಾಗಿ ದುಡಿಯದೆ ದುಡಿಮೆ  ಹಿಡಿದು ಸಾಗು 

ನಿನ್ನ ಆಸೆಗೆ ಎಂದಿಗೂ ಮಾಡಲಾಗದು ಎಣಿಕೆ
ದೇಶಕ್ಕೆ ಸಿಗಲಿ ನಿನ್ನಿಂದ  ಏನಾದರು ಕಾಣಿಕೆ 

ಮನುಷ್ಯತ್ವಕಿಂತ ಮಹತ್ವ ಮತ್ತೊಂದಿಲ್ಲ 
ಅದನ್ನು ಮರೆತರೆ ನೀನು ಮನುಷ್ಯನೇ ಅಲ್ಲ 

ಹೆತ್ತ ತಾಯಿಯ ಹೊತ್ತ ಭೂಮಿಯ ಮರೆಯಬೇಡ
ಗೊತ್ತಿರದೇ ಯಾರನ್ನೂ, ಯಾವತ್ತೂ  ಅಳಿಯಬೇಡ

ಜೀವನವೇ ಪಾಠಶಾಲೆ .ಅನುಭವಗಳೇ ಪಾಠಗಳು 
ಗೆಲ್ಲಬೇಕೆಂದರೆ ದುಡಿಯಬೇಕು ನೀ ಹಗಲಿರುಳು 

ತಿಳಿಯದು ಯಾರಿಗೂ ನಿನ್ನ ಮರಣದ ರಹಸ್ಯ 
ಕಣ್ಣು ಮುಚ್ಚುವ ಮುಂಚೆಯೇ ರೂಪಿಸಿಕೋ ನಿನ್ನದೇ ಭವಿಷ್ಯ ..

Tuesday, July 9, 2013

ಬದುಕಿನ ಬಂಡಿ ..


ಬದುಕಿನ ಬಂಡಿ ..

ನೀರಿನ ಗುಳ್ಳೆ ಹಾಗೆ ಹಲವು ಘಟನೆಗಳು 
ಮಳೆಯ ಹನಿಗಳಂತೆ ಕೆಲವು ನೆನಪುಗಳು..

ಹತ್ತಿರವಿದ್ದರೂ ದೂರವಾಗುವ ಮನಗಳು 
ನೆನೆದರೆ ತಾನಾಗಿಯೇ ಚಿಮ್ಮುವ ಕಣ್ಣಿರ ಹನಿಗಳು ..

ಬೇಡವೆಂದರೂ ಹೋಗದು ಈ ನಮ್ಮ ಪ್ರಾಣ 
ಮುಗಿಯುವವರೆಗೆ ನೆಡಸಲೇ ಬೇಕು ಬದುಕಿನ ಪಯಣ ..