ಇಷ್ಟೆಲ್ಲಾ ಇದೆ ..

Saturday, March 21, 2015

ಎಂದೂ ಮರೆಯಲಾಗದ ಗೆಳೆಯರು

ಎಂದೂ ಮರೆಯಲಾಗದ ಗೆಳೆಯರು

ನಮ್ಮ ಬದುಕಿನಲಿ ನಮಗೆ ಅನೇಕ ಜನ ಬಂದು ಹೋಗುತ್ತಾರೆ. ಕೆಲವರು ಕೇವಲ ಸ್ವಲ್ಪ ಸಮಯ ನಮ್ಮೊಂದಿಗೆ ಇದ್ದರೂ ಅವರ ನೆನಪುಗಳು ಅವರ ಕೊಟ್ಟು ಹೋದ ನೆನಪುಗಳು ನಮ್ಮನ್ನು ಸದಾ ಕಾಡುತ್ತವೆ.
ಅಂತಹ ಕೆಲವು ತಾಜಾ ನೆನಪುಗಳನ್ನು ನಾನಿಲ್ಲಿ ತೆರೆದಿದುತ್ತೇನೆ.

ಒಂದು ನನಗೆ ಸಿಕ್ಕ ಹೆಲೆಯರಲ್ಲಿ ಚಂದ್ರಶೇಖರ್ ಒಬ್ಬ .. ಅವಿನ್ಗೆ ನಾವೆಲ್ಲಾ ಚಂದ್ರು ಎಂತಲೇ ಕರಿತ್ತೆದೆವು. ಅವನ ಮೊದಲ ಪರಿಚಯವಾಗಿದ್ದು ಜೆ ಎಸ್ ಎಸ್ ಕಾಲೇಜಿನಲ್ಲಿ. ಅವನು ನಾನು ಒಂದೇ ಹಾಸ್ಟೆಲ್ ನಲ್ಲಿ ಇದ್ದೆವು ಆದರೆ ಅವನಿಗೆ ನನಗೆ ಅಸ್ಟೊಂದು ದೊಡ್ಡ ಸ್ನೇಹವ್ರಿರಲಿಲ್ಲ. ಆದರೆ ಊಟಕ್ಕೆ ಹೋಗುವಾಗ , ಸಂಜೆ ಚಹಾ ಕುಡಿಯಲು ಅವನು ನಾನು ಜೊತೆಯಲೇ ಹೋಗುತ್ತಿದ್ದೆವು.

ಪಿಯುಸಿ ಮುಗಿಯಿತು, ನಂತರ ನನಗೆ ಎಸ್ ಜೆ ಸಿ ಇ ಕಾಲೇಜು ಸಿಕ್ಕಿತು.  ಒಂದು ಅಚ್ಚರಿ ಎಂದರೆ ನಾನು ಅವನೂ ಇಬ್ಬರು ಒಂದೇ ಹಾಸ್ಟಲ್ ಹಾಗೂ ಒಂದೇ ರೂಂನಲ್ಲಿದ್ದೆವು. ಅದು ನನ್ನು ಅದೃಷ್ಟವೂ ಹೌದು.
ಅವನು ತುಂಬಾ ಮಾತನಾಡದ ಹಾಗೂ ಸ್ವಲ್ಪ ಸೌಮ್ಯ ಸ್ವಭಾವದವಾನ್ಗಿದ್ದ. ಅವನಿಗೆ ಸಿಟ್ಟು ಬರುತ್ತಿರಲಿಲ್ಲ. ಅವನದು ತುಂಬಾ ಶಿಸ್ತು. ಅವನ ಉಡುಗೆ ಇರಲಿ , ಓದುವಾಗ ಪುಸ್ತಕಗಲಿರಲಿ ಎಲ್ಲವೂ ಶಿಸ್ತು. ನನ್ನದು ಎಸಕ್ಟ್ಲ್ಯ್  ಒಪೋಸಿತೆ.

ಅವನು ನಾನು ಹೆಚ್ಚು ಹೊಂದಿಕೊದಿದ್ದು ಹಾಗು ಅರ್ಥ ಮಾಡಿಕೊಂಡಿದ್ದು ಅಲ್ಲಿಯೇ.  ಅವನು ನಾನು ಮೊದಲ ಸೆಮಿಸ್ಟರ್ನಿಂದಲೇ  ತುಂಬಾ ಹತ್ತಿರವಾದೆವು. ನನ್ನ ಫ್ಯಾಮಿಲಿ ವಿಚಾರಗಳನ್ನು ಅವನೊಂದಿಗೆ ನಾನು ಶೇರ್ ಮಾಡುತ್ತಿದ್ದೆ.. ಅವನ್ನು ತನ್ನ ಅಣ್ಣ ಅಕ್ಕ ಮನೆಯ ವಿಚಾರಗಳನ್ನು ಹೇಳಿಕೊಳ್ಳುತ್ತಿದ್ದ. ಅವನಿಗೆ ಇಷ್ತ್ವಾದದೆಂದರೆ
ಬೈಕ್ ರೈಡಿಂಗ್. ಅದಕಂತಲೇ ಅವನು ಹಠವಿಡಿದು ಮೂರನೇ ಸೆಮಿಸ್ಟರ್ನಲ್ಲೆ  ಒಂದು ಬೈಕ್ ತೆಗೆದಿಕೊಂಡ.
ನಾನೂ ಅವನು ರವಿವಾರ ಅದರಲ್ಲಿಯೇ ಆಚೆ ಹೋಗುತಿದೆವು..

ಅವನು ತುಂಬಾ ಸೂಕ್ಷ್ಮ ವಿಚಾರಗಳನ್ನು ಹೆಚ್ಚು ಮತುರಿಟಿ ಇಂದ ನಿಭಾಯಿಸುತ್ತಿದ್ದ ಅಲ್ಲದೆ ಪರಿಕ್ಷ್ಯಲ್ಲಿ ಕಡಿಮೆ ಅಂಕ ಬಂದರೆ , ಯಾವದೋ ಇಂಟರ್ನಲ್ಸ್ ನಲ್ಲಿ ಕಡಿಮೆ ಬಂದರೆ ಏನನ್ನು ತಲೆಗೆ ಹಚ್ಚಿಕೊಲ್ಲುತ್ತಿದ್ದಿಲ್ಲ. ಆದರೆ ಅವನ ಪಾಲಿನ ಪ್ರಯತ್ನ ಯಾವಗಲು ಮಾಡುತ್ತಿದ್ದ.

ಮೊತ್ತೊಂದು ಅವನಿಗೆ ಇಷ್ಟವಾದದೆಂದರೆ ಸಿನಿಮಾ ನೋಡುವುದು. ತೆಲಗು .ಕನ್ನಡ , ಇಂಗ್ಲಿಷ್ , ತಮಿಳು ಎಲ್ಲ ಭಾಷೆಯನ್ನೂ ಜೊತೆಗೆ ನೋಡುತ್ತಿದ್ದೆವು..
ಒಬ್ಬ ಒಳ್ಳೆಯ ಗೆಳೆಯ , ಒಬ್ಬ ಒಳ್ಳೆಯ ರೂಮತೆಸ್ ಆಗಿದ್ದೆವು. ನಮ್ಮ ಹುಟ್ಟುಹಬ್ಬಗಳನ್ನು ಜೋತೆಯೇಲ್ಲೇ ಆಚರಿಸಿಕೊಂದಿದೇವೆ. ಆ ನೆನಪುಗಳು ಇನ್ನು ಕಾದಿವೆ.

ಕೊನೆಯ ವರ್ಷ ನಾವು ಹೆಚ್ಚು ಕಾಲ ಜೊತೆಯಲ್ಲೇ ಕಳಿಯಲು ಆಗಲಿಲ್ಲ. ಏಕೆಂದರೆ ನಾನು ನನ್ನ ಮೊತ್ತಬ್ಬ ಸ್ನೇಹಿತ ಸೂರ್ಯನ  ಮನೆಯಲ್ಲೇ ಹೆಚ್ಹು ಕಾಲ ಕಳೆಯುತ್ತಿದ್ದೆ. ಆದರೆ ನಮ್ಮಿಬ್ಬರ ಸ್ನೇಹ ಇನ್ನು ಹಾಗೆ ಇದೆ.
ಹಾಸ್ಟೆಲ್ ಜೀವನ ನಮಗೆ ಎಲ್ಲ ಹೇಳಿ ಕೊಡುತ್ತದೆ ಅಲ್ಲದೆ ನಮಗೆ ಮರೆಯಲಾಗದ ಗೆಳೆಯರನ್ನು ಕೊಡುತ್ತದೆ.

ಚಂದ್ರು ಮತ್ತು ನಾನು ಇಬ್ಬರು ಟಕ್ಸ್ ಕಂಪನಿಗೆ ಸೆಲೆಕ್ಟ್ ಆಗಿದ್ದೆವು. ಇಬ್ಬರಿಗೂ ಅದು ಖುಶಿಕೊತ್ತಿತ್ತು.
ಹಾಸ್ಟೆಲ್ನಲ್ಲಿ  ಚಂದ್ರು , ಬಸು. ಶ್ರೀನಿವಾಸ, ಉದಯ ಹೀಗೆ ಹಲವು ಗೆಳೆಯರು ನನಗೆ ಇನ್ನು ಆ ಹಳೆಯ ನೆನಪುಗಳನ್ನು ಕೊಡುತ್ತಾರೆ. ಅವರು ನಾನು ಎಲಿಂದಲೂ ಬಂದು ಒಂದೇ ಕಾಲೇಜು , ಹಾಸ್ಟೆಲ್ ಸೇರಿ ಇಂದು  ಕೊನೆವರೆಗೆ ಜೊತೆಗಿರುವ ಸ್ನೇಹಿತರನತೆ ಇದ್ದೇವೆ..
ನಮ್ಮ ಬದುಕಿನಲ್ಲೂ ಹೀಗೆ ಆಕಸ್ಮಾತಾಗಿ ಯಾರೋ ಸಿಗುತ್ತಾರೆ. ಪರಿಚಯವಿರದಿದ್ದರೂ ,ಸಂಬಂಧವಿರದಿದ್ದರೂ ನಮಗೆ ಸಹಾಯ ಮಾಡಿ ಹೋಗಿರುತ್ತಾರೆ. ಅವರ ಮುಖ ಪರಿಚಯವೂ ಕೂಡ ನಮಗೆ ನೆನಪಿಗೆ ಬರುವುದಿಲ್ಲ. ನಮ್ಮ ಅನಿರೀಕ್ಷಿತ ಬದುಕಿನಲ್ಲಿ ಅಕಸ್ಮಾತಾಗಿ ಬಂದು ನಮ್ಮ ಬದುಕಿಗೆ ಅವರ ಒಂದಿಷ್ಟು ನೆನಪು ಕೊಟ್ಟು ಹೋಗಿರುತ್ತಾರೆ.
ಅಂತಹ ಅನಿರೀಕ್ಷಿತ ತಿರುವುಗಳಿಂದಲೇ ನಮ್ಮ ಬದುಕು ಸುಂದರವಾಗುತ್ತ ಹೋಗುತ್ತದೆ.

ನಾವು ಅಂತಹ ನೆನಪುಗಾನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳಬೇಕು. ಕೆಲವು ಸಲಿ ನಮ್ಮ ಕೆಲಸದ ಒತ್ತಡದಿಂದ ಹಾಗೂ ಇನ್ನಿತರ ಟೆನ್ಶನ್ ಗಳಿದ ನಾವು ನಮ್ಮ ಸ್ನೇಹಿತರಿಗೆ ಸಮಯ ಕೊದವುದೇ ಇಲ್ಲ . ಆದರೆ ಅಂತಹ ಸ್ನೇಹಿತರನ್ನು ಕಳೆದುಕೊಳ್ಳುವುದು ತಪ್ಪು . ಅವರೊಂದಿಗೆ ಸದಾ ಸಂಪರ್ಕದಲ್ಲಿದ್ದು ಎಲ್ಲದಕ್ಕೂ ಮುಕ್ಯವಾಗಿ ಬೇಕಾದದ್ದು ಸ್ನೇಹ ಮತ್ತು ಪ್ರೀತಿ. ಅದೇ ನಮ್ಮ ಬದುಕಿನ ಜೀವಾಳ . ಎಷ್ಟು ದುಡ್ಡು ಗಳಿಸಿದ್ದರು ನಮಗೆ ನೆಮ್ಮದಿ ಕೊಡುವುದು ನಮ್ಮ ಸ್ನೇಹಿತರ ಮಾತುಗಳು ಹರಟೆಗಳು  ಸದಾ ಜೊತೆಯಲ್ಲೇ ನೆನಪಲ್ಲಿರುವ  ಸಂಬಂಧಗಳು

ಹೀಗೆ ಎಲ್ಲರು ಜೀವನದಲ್ಲೂ ಒಬ್ಬರು ಈ ರೀತಿ ಸಹಾಯ ಮಾಡಿರುತ್ತಾರೆ.
ಮೊನ್ನೆ Housing.com ಅವರ https://housing.com/.ವಿಡಿಯೋ ನೋಡಿದಾಗ ನನಗೆ ಈ ಘಟನೆ ನೆನಪಾಯಿತು.ನಿಮ್ಮ ಜೀವನದಲ್ಲಿನ ಅತ್ಯಂತ ಗೆಲುವಿನ ಸಮಯವನ್ನು ಮೊತ್ತೊಮ್ಮೆ ಮೆಲಕು ಹಾಕಿ ಹಾಗೂ ನಿಮ್ಮ ಜೀವನದ ಆ ಮರೆಯಲಾಗದ ನೆನಪನ್ನು ನೀವು ತಿಳಿಸಿ.
ಅಂದರೆ ಕಷ್ಟದ ದಿನಗಳಲ್ಲಿ ನಮ್ಮನ್ನು ಕೈ ಬಿಡದೇ ಕಷ್ಟದಿಂದ ನಮ್ಮನ್ನು ಪಾರು ಮಾಡಿ ಏನನ್ನು ಅಪೇಕ್ಷಿಸದೆ ನಮ್ಮ ಗೆಲುವನ್ನೇ ಮಾತ್ರ ಬಯಸುವ ವ್ಯಕ್ತಿಗಳವರು.
ಕೆಲವೊಬ್ಬರಿಗೆ ಅನೇಕ ಜನ ಗಾಡ್ ಫಾದರ್ ಆಗಿಬಿಡುತ್ತಾರೆ. ಅಶೋತೋದು ಒಳ್ಳೆಯ ಜನ ಅವರ ಜೀವನದಲ್ಲಿ ಬಂದು ಅವರಿಗೆ ಸಹಾಯ ಮಾಡಿರುತ್ತಾರೆ. ಕೆಲವೊಮ್ಮೆ ಅಂಥವರನ್ನು ನಾವು ಮರೆತು ಬಿಡುತ್ತೇವೆ. ಅಥವಾ ಅವ್ರು ತಮಗೆ ತಾವೇ ಕಣ್ಮರೆ ಆಗಿಬಿಡುತ್ತಾರೆ. ಆದರೆ ಅವರ ಸಹಾಯದಿಂದ ನಾವು ಅದೆಸ್ಟೋ ನಮ್ಮ ಜೀವನದಲ್ಲಿ ಮುಂದೆ ಬಂದಿರುತ್ತೇವೆ ,ಗೆಲುವನ್ನ ಕಂಡಿರುತ್ತೇವೆ. ಅಂಥವರನ್ನು ನೆನೆದು ಅವರಿಗೆ ನಾವು ಎಷ್ಟು ಥ್ಯಾಂಕ್ಸ್ ಹೇಳಿದರೂ ಅದು ಕಡಿಮೆಯೇ..















No comments:

Post a Comment