ಇಷ್ಟೆಲ್ಲಾ ಇದೆ ..

Tuesday, August 27, 2013

ಆತ್ಮಕವನ..!

 ಆತ್ಮಕವನ..!

ಯಾರು ಇಲ್ಲಿ ಅನಾಥರಲ್ಲ
ಯಾರು ಇಲ್ಲಿ ಅಯೋಗ್ಯರಲ್ಲ
ಹಣೆ ನಮ್ಮದಾದರು ಹಣೆಬರಹ ಅವನದು
ಧ್ವನಿ ನಮ್ಮದಷ್ಟೇ ,ಸಂಭಾಷಣೆ ಅವನದು
ನೀನು ಬಚ್ಚಿಟ್ಟಿದ್ದು ಏನೇನು ಇಲ್ಲಿ ಉಳಿಯದು
ನೀನು ಮಾಡಿದ ಸತ್ಕಾರ್ಯ ಇಲ್ಲಿ ಅಳಿಯದು
ಭೂಮಿಗೆ ಎಂದಿಗೂ ಭಾರವಾಗದಿರು
ನಿನ್ನವರಿಗೆ ಯಾವತ್ತು BORE ಆಗದಿರು
ಬೇರೆಯವರಿಗೆ ನೀನು ಏನೇ ಆದರೂ
ಇರುವವರೆಗೆ ನಿನಗೆ ನೀನೇ 'ಗುರು'

ದೇಸಿ CHAI


ಟೀ ಅಥವಾ ಕಾಫಿ 

 ಇದರಲ್ಲಿ ಕುಡಿಯುವ ಸುಖ 
ಯಾವ ' COFFEE DAY ' ಲೂ ಸಿಗಲ್ಲ ..!

Sunday, August 25, 2013

ಒಂದು ಹೆಣ್ಣಿನ ಕಥೆ ...!



ಒಂದು ಹೆಣ್ಣಿನ ಕಥೆ ...!

ತಡವಾದರೂ ಕಂಕಣ ಭಾಗ್ಯ ಕೂಡಿಬಂದಿತ್ತು.
ಹುಡುಗಿಯ ಮನದಲ್ಲಿ ವೈರಾಗ್ಯ ದೂರಹೂಗಿತ್ತು
ಹೆತ್ತು ಹೊತ್ತು ಬೆಳಸಿದ ಹೆತ್ತವರು ಒಂದೆಡೆ
ಒಂದೇ ರಕ್ತ ಹಂಚಿಕೊಂಡು ಬೆಳೆದವರು ಇನ್ನೊಂದೆಡೆ
ಬೆಳೆದು  ಬಂದ ಮನೆಯ  ಋಣ  ಮುಗಿದಿತ್ತು
ಎಲ್ಲ ಬಿಟ್ಟು ಹೋಗಬೇಕೆಂದು  ಆ ಮೂಗ್ದ ಮನ ನೊಂದಿತ್ತು
ತನ್ನ ಮದುವೆಯಿಂದ  ಹೆತ್ತವರಿಗೆ ಹೊರೆ ಕಡಿಮೆ ಎಂದು
ಹೇಳಿತ್ತು ಅವಳ ಹೃದಯ ಬಲು ನೊಂದು ..
ಕೈ ಹಿಡಿಯುವ ಹುಡುಗನ ಬಗ್ಗೆ ಏನೇನೋ ವಿಚಾರ
ಕನಸಲ್ಲಿಯೂ ಕಾಡುತಲಿತ್ತು ಅವಳನ್ನು ಯಾವುದೋ ಅವತಾರ

ನಡದೇ ಹೋಯಿತು ಮೂರು ಗಂಟು ಕಟ್ಟುವ ಕೆಲಸ
ಅವಳಿಗೆ ಇನ್ನು ಹೊಸ ಅಡುಗೆ ಮನೆಯ ಸಹವಾಸ
ಹುಡುಗನ ಮನೆಯ ಹೊಸ್ತಿಲು ರಂಗು ಪಡೆದಿತ್ತು
ಹೊಸ ಸೊಸೆಯ ಪೂಜೆ ಅದಕ್ಕೆ ಒಲಿದಿತ್ತು
ಕತ್ತೆ ಎಂತ ಅತ್ತೆ .ದೆವ್ವದಂತ ಮಾವ , ಖ್ಯಾರೆ ಅನ್ನದ ಪತಿ
ಅಳುವ ಕಣ್ಣಿಗೆ ಒರೆಸುವ ಕೈ ಸಿಗದಂತಾಗಿತ್ತು ಅವಳ ಸ್ಥಿತಿ
ಓಡಿ ಹೋಗಬೇಕೆನ್ನುತ್ತಿತು ಅವಳ ಮನ, ಚುಚ್ಚು ಮಾತು ಕೇಳಿ
ಓಡುವ ಕಾಲುಗಳನ್ನು ತಡೆದಿತ್ತು ಕತ್ತಿನಲ್ಲಿರುವ ಅವಳ ತಾಳಿ
ಮೂರು ಗಂಟು ಬಿದ್ದು ಮೂರು ವರ್ಷವಾದರೂ ಅವಳಾಗಲಿಲ್ಲ ತಾಯಿ
ಅವಳಿಗೆ ಹೇಗೆತಾನೆ ಆದೀತು ಮುಚ್ಚಲು  ಊರ ಜನರ ಕೊಂಕು ಬಾಯಿ ..?
ಅವಳ ವ್ರತವೋ ದೇವರ ವರವೋ  ಹೆಣ್ಣು  ಮಗು ಹುಟ್ಟಿತು 
ಬರಿ ನೋವಿನಲ್ಲಿದ್ದ ಅವಳ ತಾಯ್ತನ ಸತ್ತು ಬದುಕಿತ್ತು
ಕಟು ವಿಧಿಯ ಆಟ ಮತ್ತೆ ಶುರುವಾಗಿತ್ತು ,
ಹುಟ್ಟಿ ಒಂದೇ ವಾರದಲ್ಲಿ ಮಗು ಮಸಣ ಸೇರಿತ್ತು ..!
ಸಾವಿನಂತ ನೋವಿಗೆ ತಾಯಿಯ ಕರಳು ಸುಟ್ಟು ಹೋಗಿತ್ತು
ಬದುಕಲು ಉಳಿದಿದ್ದ ಒಂದೇ ಒಂದು ಎಳೆ ಕಳೆದುಹೋಗಿತ್ತು ...


ದಿನ ಸಾಯುವ ಬದಲು ,ಕೊನೆ ಸಾವನ್ನು ನೋಡಲು
ಅವತನಿಸುತಿತ್ತು ಅವಳ ಮನದ ಅಳಲು
ಕೊನೆಗೂ ಕೊನೆಯ ಉಸಿರು ಬಿಟ್ಟಳು  ಆ ಹೆಣ್ಣು
ಸತ್ತಾಗಲು ಅಳುತಲಿತ್ತು ಅವಳ ಕಣ್ಣು ..!
......................!!...............................!......................................!...........................................!
ಒಂದು ಹೆಣ್ಣು ಬಡತನವಿದ್ದರೂ ಬಾಳುವಳು ;
ಆದರೆ ತಾಯ್ತನ ಸಿಗದಿದ್ದರೆ ಬದುಕಲು ಇಚ್ಚಿಸಿಲಾರಲು ..


Saturday, August 24, 2013

ಬೆಳದಿಂಗಳಿನಂತೆ




ಬೆಳದಿಂಗಳಿನಂತೆ
ಸಪ್ತ ಸ್ವರಗಳು ಸೇರಿ
ಸುಂದರ ಸಂಗೀತವಾಗುವಂತೆ ..
ನದಿಗಳೆಲ್ಲಾ ಓಡಿ
ಸಮುದ್ರದ ಮಡಿಲು ಸೇರುವಂತೆ ..
ಹೂವಿನ ಪರಿಮಳಗಳೆಲ್ಲಾ ಸೇರಿ
ಜೇನು ಆಗುವಂತೆ ..
ಏಳು ಬಣ್ಣಗಳು ಸೇರಿ
ಕಾಮನಬಿಲ್ಲುವಾಗುವಂತೆ ...
ನಮ್ಮ ಪ್ರೀತಿ ,
ಚಂದಿರ ಚೆಲ್ಲಿದ ಬೆಳದಿಂಗಳಿನಂತೆ

Friday, August 23, 2013

ಪ್ರೀತಿ





ಪ್ರೀತಿ ಇರುವಾಗ ..
ಪಕ್ಷಿಯಂತೆ ಹಾರುವುದು ಹೃದಯ
ಗೊತ್ತಾಗದೆ ಹೋಗುವದು ಸಮಯ ..
ಹೊಸ ಹೊಸ ಭಾವನೆಗಳ  ಪರಿಚಯ ..
ನಿರಂತರ ಕನಸುಗಳ ವಿನಿಮಯ


 ಪ್ರೀತಿ  ಇಲ್ಲದ ಮೇಲೆ
ಕಂಡ ಕನಸುಗಳು ಮಾಯ
ಹೃದಯದಲ್ಲಿ ವಾಸಿಆಗದ ಗಾಯ
ವಿಷಾದ ಒಂದೇ ಬದುಕಿನ ವಿಷಯ
ಕಣ್ಣಿಗೆ ಕಣ್ಣಿರೊಂದೇ ಅನಿವಾರ್ಯ

Tuesday, August 6, 2013

ಪ್ರೀತಿಯ ಆಳ ..

ತಿರುಗುವ ಭೂಮಿ ನಿಂತರೂ
ನನ್ನ ಪ್ರೀತಿ ನಿಲ್ಲಲ್ಲ ...
ಚಂದಿರನ ಬೆಳದಿಂಗಳು ಖಾಲಿಯಾದರೂ
ನನ್ನ ಹೃದಯದಲ್ಲಿನ ನಿನ್ನ ನೆನಪುಗಳು ಖಾಲಿಯಾಗಲ್ಲ ..!

Monday, August 5, 2013

AMBULANCE - its just not a vehicle..!





Whenever we see an “ AMBULANCE “ passing near by us, its our DUTY to make space for that emergency vehicle. But according to me there is another small duty for all of us.
Whenever I see an ambulance ( or even I hear that siren sound) I pray GOD for a couple of seconds that “ May the person inside the ambulance recover very soon and May god bless him”. )i saw that in one of the Telugu film but I believe in that.! . Everyday we pray for us ,our FAMILY and for our FRIENDS. May be the person inside the vehicle is unknown for us but at least we know that he/ she is in trouble. So at least we can pray for couple of seconds for him/her. I have been doing this from past five semesters. I bet u, it will bring a very big satisfaction in u after u do that.! Because at the end of the day “ You wished someone whom you really don’t know”.

My point is “ Sometimes if a single quote OR a single book OR a single situation turns a person’s life; WHY cant a “WISH “from us bring a person’s life back ..!?

Sunday, August 4, 2013

One of The Best Moments in SJCE…





One of The Best Moments in SJCE…!
It was on 24th March.
Shabd , An Annual state level literary Fest ( Organized By SJCE Editorial Board)was happening. The fest went very well. This year we witnessed plenty of students from different colleges and different streams participating in many events. The number of participants were doubled this year as compared to last year. The same day We bring out our college magazine -Jayzine. This time it is a special edition as we are celebrating Golden jubilee year.

It was my three years of journey in the editorial board . I just wanted to thank each one of the beautiful people on the board. So I thought of giving my book , Enna todalu nudigalu- a collection of my poems, as a token of my love and respect towards them.. While giving my book , one my friend asked my signature on the book. I proudly put my signature on it and gave him. Immediately after him, all my friends asked the same. I put my signature ( u can call its ‘autograph’) on the book and gave to each of them. I was literally in tears and at the same time I was really very happy for that…!!
I remembered A.P.J.Abdul Kalamji once told “ you can call it’s a SUCCESS when your signature turns into an autograph “.

Am not a big shot in a writing field. Though I have the sense of satisfaction of achieving something in the literature field.

And thanks for everyone who supported me throughout this beautiful journey of mine..