ಇಷ್ಟೆಲ್ಲಾ ಇದೆ ..

Saturday, December 14, 2013

ಒಳಬೆಳಕು


ಒಳಬೆಳಕು 

ಕಣ್ಣಿದ್ದರೂ ಅಂಧ ನಾನು 
ರೆಪ್ಪೆ ಮುಚ್ಚಿದರೂ ಕತ್ತಲು
ರೆಪ್ಪೆ ತೆರೆದರೂ ಕತ್ತಲು 
ನನ್ನ ಅಂಧಕಾರವನ್ನು ಎದುರಿಸಲಾಗದೆ 
ನಂದು ಹೋಗಿದೆ ನನ್ನ ಒಳಬೆಳಕು 

ಬಣ್ಣಗಳ ಅರಿವಿಲ್ಲ ಎನಗೆ 
ಬಣ್ಣ ಹಚ್ಚಿ ಆಡುವ ಆಟವೇ ಕೊನೆಗೆ 
ಸತ್ಯದರ್ಶನ ತೋರುವ ಹೊಸಬೆಳಕಿನ ನಿರೀಕ್ಷಣೆಯಲ್ಲೇ 
ಉಸಿರು ಬಿಗಿಹಿಡಿದು ನಿಂತಿದೆ ನನ್ನ ಬದುಕು 

Saturday, December 7, 2013

ವಿದ್ಯಾಪೋಷಕ



ವಿದ್ಯಾಪೋಷಕ
(An Institute which provides the financial support for the students who are in need )

ಶಿಕ್ಷಣಕ್ಕೆ ಬಡತನದ ಸೋಂಕು ತಗುಲಿದಾಗ 
ಹಳ್ಳಿ ರೈತನ ಮಗ ದಿಲ್ಲಿ ಕನಸು ಕಂಡಾಗ 
ಭವಿಷ್ಯದ ಬಗ್ಗೆ ಬಲು ದೊಡ್ಡ ಪ್ರಶ್ನೆ ಮೂಡಿದಾಗ 
ಗುರಿ ಮುಂದೆ ಇದ್ದರೂ ಬೆನ್ನು ತಟ್ಟುವ ಗುರು ಇಲ್ಲದಾಗ 
ನಮ್ಮ ಆ ಮೌನದ ಕೂಗಿಗೆ ಸ್ಪಂದಿಸುವ, ದಾರಿತೊರಿಸುವ 
ಕಾಯಕ ಮಾಡುತಿದೆ ನಮ್ಮ ಸಂಸ್ಥೆ ವಿದ್ಯಾಪೋಷಕ 

ವಿದ್ಯಾಪೋಷಕ ನಮ್ಮ ವಿದ್ಯಾಪೋಷಕ 
ವಿದ್ಯಾವಂತ ವಿದ್ಯಾರ್ಥಿಗಳ ಭವಿಷ್ಯ ರಕ್ಷಕ 
ನಮ್ಮ ಕನುಸುಗಳಿಗೆ ಜೀವ ತುಂಬುವ ಆಮ್ಲಜನಕ 
ಬಿದ್ದರೆ ಕೈ ಹಿಡಿಯುವ ,ತಪ್ಪಿದರೆ ತಿದ್ದುವ ಪಾಲಕ 
ಶಿಕ್ಷಣದ ಪೋಷಣೆಯ ಜೊತೆಗೆ ವ್ಯಕ್ತಿತ್ವ ನಿರ್ಮಿಸುವ ಶಿಕ್ಷಕ 

ಈ ಸಂಸ್ಥೆಯ ಕಟ್ಟಲು  ಸ್ವಯಂ ಸೇವಕರ ಶ್ರಮವಿದೆ  
ದುಡ್ಡು ಕೊಟ್ಟು, ಬೆನ್ನು ತಟ್ಟುವ ದಾನಿಗಳ ಆಶೀರ್ವಾದವಿದೆ 
ಗುರಿ ಹಿಡಿದು ನಡೆದ ವಿದ್ಯಾರ್ಥಿಗಳ ಆದರ್ಶವಿದೆ 
ಜಾತಿ-ಬೇಧವಿಲ್ಲದೆ 'ನಾವೆಲ್ಲರೂ ಒಂದೇ 'ಎನ್ನುವ ಕೂಗು ಇಲ್ಲಿದೆ 

'ನಡೆದು ಬಂದ ದಾರಿಯನ್ನು ಮರಯದಿರು 'ಅನ್ನುವ ಹಾಗೆ
ನಾವೆಲ್ಲರೂ ಸಂಸ್ಥೆಯ ಜೊತೆಗಿರೋಣ  ಒಂದು ಕುಟುಂಬದ ಹಾಗೆ !

ಪರಭಾಷಾ ವಿರೋಧಿಗಳಿಗೆ

ಪರಭಾಷಾ ವಿರೋಧಿಗಳಿಗೆ...

ನಿಮ್ಮ ಮಾತೃ ಭಾಷೆಯನ್ನು ಪೂಜಿಸಿ 
ಇತರ ಭಾಷೆಗಳನ್ನು ಗೌರವಿಸಿ 

ಭಾಷೆ - ನಾಲಿಗೆಯ ಮೇಲಿರಲಿ 
ದೇಶ ,ದೇಶಭಕ್ತಿಹೃದಯದಲ್ಲಿರಲಿ.







ನಿಶ್ಚಿತ



ನಿಶ್ಚಿತ 

ಹುಟ್ಟು ಉಚಿತ 
ಸಾವು ಖಚಿತ 
ಹುಟ್ಟು ಸಾವುಗಳ ಮಧ್ಯ 
ನಮ್ಮ ಜೀವನ 
ಸುಖ- ದು:ಖಗಳ ಮಿಶ್ರಿತ ...

ನಿನ್ನೆ ಎಂಬುದು 'ನೆನಪು' 
ನಾಳೆ ಎಂಬುದು 'ಕನಸು '
ಇಂದು ಎಂಬುದು ಮಾತ್ರ ' ಸತ್ಯ '
ಸತ್ಯ ನಿಶ್ಚಿತ ... ನಿಶ್ಚಿತ..





ಪ್ರೇಮ ಗೀತೆ


ಪ್ರೇಮ ಗೀತೆ...! 
ಹಿಡಿದಿವೆ ಕನಸುಗಳು ಮಸಣದ ದಾರಿ 
ಕಟ್ಟುವೆ ನಿನ್ನೆಲ್ಲಾ ನೆನಪುಗಳಿಗೆ ಗೋರಿ 
ಅದರಲ್ಲೂ ಬಾರಿಸುವೆ ಒಂದಿಷ್ಟು ಸೆಂಚೂರಿ 
ನಡಗುವ ಚಳಿಯಲ್ಲೂ ,ಹೃದಯದಲ್ಲೀಗ ಸುಡುವ ಉರಿ ..

ಹೃದಯದ ಮಿಡಿತದಿಂದಲೇ ಹೊಸದೊಂದು ಸಂಗೀತ 
ಪ್ರತಿ ಸಾಲಿನಲ್ಲಿ ನಿನ್ನ ವರ್ಣನೆಯೇ ಅದರ ಇಂಗಿತ 
ನಿಂತಿದೆ ನನ್ನ ಹೃದಯ , ನಿನ್ನ ಧ್ವನಿಗೆ ಕಾಯುತ 
ಯುಗಗಳೇ ಕಳೆದರೂ ನಮ್ಮ 'ಪ್ರೇಮ ಗೀತೆ ' ಶಾಶ್ವತ ..!









ಜನರ ಪ್ರತಿಕ್ರಿಯೆ


ಜನರ ಪ್ರತಿಕ್ರಿಯೆ 

ಗೆದ್ದರೆ ಬಲು ಕೇಕೆ 
     ಸೋತರೆ ಬರೀ 'ಟೀಕೆ '..!

ನಗುವಿರಲಿ !

ನಗುವಿರಲಿ ! 
ನಿಮ್ಮ ತುಟಿಯ ಮೇಲೆ ಸದಾ ನಗುವಿರಲಿ
        ಆ ನಗು ಮೊತ್ತಬ್ಬರ ಕಣ್ಣಲ್ಲಿ ನೀರು ತರದಿರಲಿ 

Wednesday, November 13, 2013

ಕೇಳೋ ಮಂಕುತಿಮ್ಮ ಕೇಳು !


ಕೇಳೋ ಮಂಕುತಿಮ್ಮ ಕೇಳು
ಹುಟ್ಟು ಸಾವಿನ ಅಂತರ ನೀ ಕೇಳು
ಹುಟ್ಟು ಒಂದು ಗೆರೆ
ಸಾವು ಒಂದು ಗೆರೆ
ಅವರೆಡರ ನಡುವೆ ಮೂಡಿಸುವ ಬರಹಗಳೇ ನಮ್ಮ ಬದುಕು !

ಕೇಳೋ ಮಂಕುತಿಮ್ಮ ಕೇಳು
ಮೂರು ದಿನದ ಆಟ ಬಾಳು
ಗೆಲವು ಸೋಲಿನ ಹೋರಾಟ
ನೋವು ನಲಿವುಗಳ ಮಾರಾಟ
ಏನೆಯಾದರೂ ನಿಲ್ಲದು 'ಓಟ' ಬದುಕು

ಕೇಳೋ ಮಂಕುತಿಮ್ಮ ಕೇಳು
ಕನಸುಗಳ ಮಳಿಗೆಯಿಂದ ನೀ ಏಳು
ನಿನ್ನೆಲ್ಲಾ ಕನಸುಗಳು ನನಸಾಗದು
ಆದರೂ ನಿನ್ನ ಪ್ರಯತ್ನ ನಿಲ್ಲಬಾರದು
ಒಂದು ಸುಂದರ ಕನಸು - ನಮ್ಮ ಬದುಕು

ಕೇಳೋ ಮಂಕುತಿಮ್ಮ ಕೇಳು
ಜಾತ್ರೆಯ ಹಾಗೆ ನಮ್ಮ ಬಾಳು
ನೀನೇನೆ ಇಲ್ಲಿ  ಕೊಂಡರೂ
ನಿನ್ನನ್ನೇ ನೀ ಮಾರಿಕೊಂಡರೂ
ನಿನ್ನ ಗಳಿಕೆ ಇಲ್ಲಿ ಶೂನ್ಯ

ಶೂನ್ಯವನ್ನು ಶೋಧಿಸುವುದೇ  ನಮ್ಮ ಬದುಕು !


Sunday, November 3, 2013

ನಾವು ಕನ್ನಡಿಗರು


ನಾವು ಕನ್ನಡಿಗರು 
ಬಾಯಿ ಹೊಲದ್ರು ಮೂಗಲ್ಲಿ ಮಾತಡ್ತಿವಿ ಕನ್ನಡ ಭಾಷೆ
ಎಷ್ಟೇ ಮಾತಾಡಿದ್ರು ತಿರೋದಿಲ್ಲ ಭಾಷೆಯ ತೃಷೆ
ಇಲ್ಲಿ ಹುಟ್ಟುವುದೇ ಪುಣ್ಯ ; ಸ್ವರ್ಗದ ಹಾಗೆ ಕರುನಾಡು

ಮಣ್ಣಿನ ಕಣಕಣದಲ್ಲೂ ಕೇಳುತಿದೆ ಕಸ್ತೂರಿ ಕನ್ನಡದ ಹಾಡು

Saturday, November 2, 2013

ದೀಪಾವಳಿ

ದೀಪಾವಳಿ'

ಮನೆಯ ದೀಪ ಹಚ್ಚುವುದು ದೈನಂದಿನ ದೃಶ್ಯಾವಳಿ
ಮನದ ದೀಪ ಹಚ್ಚುವುದೇ ನಿಜವಾದ 'ದೀಪಾವಳಿ'
ಮನೆಯ ಹಾಗು ಮನದ ದೀಪಗಳೇರಡು ಹಚ್ಚೋಣ
ಎಲ್ಲ ಜೀವಕುಲದ ಬಾಳಿಗೆ ಬೆಳಕು ಚೆಲ್ಲೋಣ..

Friday, November 1, 2013

ಎಲ್ಲಿದೆ..?

ನಾನು ಅಂತಮೂರ್ಖಿಯಾದಾಗ ನನ್ನ ಕಾಡುವ ಪ್ರಶ್ನೆಗಳು ..


ಎಲ್ಲಿದೆ..?


ಎಲ್ಲಿದೆ ಬಣ್ಣವಿಲ್ಲದ ಬದುಕು
ಎಲ್ಲಿದೆ ಅಂಧತ್ವ ದೂರ ಮಾಡುವ ಬೆಳಕು
ಎಲ್ಲಿದೆ ಸಾವಿಲ್ಲದ ,ನೋವಿಲ್ಲದ ಜೀವ
ಎಲ್ಲಿದೆ ಏನನ್ನು ಆಪೇಕ್ಷಿಸದ ಭಕ್ತಿಭಾವ

ಎಲ್ಲಿದೆ ತಾಯ್ತನ ಮರೆತ ಹೆತ್ತ ಕರಳು
ಎಲ್ಲಿದೆ ಸತ್ಯ ಹೇಳುವ ಪಡಿನೆರಳು
ಎಲ್ಲಿದೆ ನಾವಾಡುವ ಮಾತಿನಲ್ಲಿ ನಿವೇದನೆ
ಎಲ್ಲಿದೆ ನಮ್ಮ ಕರ್ತವ್ಯದ ಸಂವೇದನೆ

ಎಲ್ಲಿದೆ ಮಾತನಾಡುವ ಮೌನ
ಎಲ್ಲಿದೆ ಒಪ್ಪಿ,ಅಪ್ಪಿ ನೀಡುವ ಸನ್ಮಾನ
ಎಲ್ಲಿದೆ ನಾನು-ನನ್ನದೆನ್ನುವದಕ್ಕೆ ಕಾರಣ
ಎಲ್ಲಿದೆ ಸಾವಿಗೂ ನೀಡುವ ಆಮಂತ್ರಣ

ಎಲ್ಲಿದೆ ದೇಹ ಮನಸಿಗೂ ಅಂತರ
ಎಲ್ಲಿದೆ ಬದಲಾವಣೆ ತರೋ ಮನ್ವಂತರ
ಎಲ್ಲಿದೆ ಸೋಲು ನೋಡದ ಗೆಲವು
ಎಲ್ಲಿದೆ ನೋವು ನೀಡದ ಒಲವು

ಎಲ್ಲಿದೆ ಎಲ್ಲ ತಿಳಿಸುವ ಪುಸ್ತಕ
ಎಲ್ಲಿದೆ ಎಲ್ಲ ಬುದ್ಧಿ ಇರುವ ಮಸ್ತಕ
ಎಲ್ಲಿದೆ ಎಲ್ಲ ಮೀರುವ ಎತ್ತರ
ಎಲ್ಲಿದೆ ಇಲ್ಲಿ ಎಲ್ಲ ಪ್ರಶ್ನೆಗೆ ಉತ್ತರ..?

Monday, September 16, 2013

ಒಂಟಿತನ ಕಳೆದ ಮೇಲೆ

ಒಂಟಿತನ ಕಳೆದ ಮೇಲೆ

ಒಂಟಿಯಾಗಿದ್ದಾಗ ಹುಡುಗನಿಗೆ
 ಬೇಸಿಗೆಕಾಲ , ಚಳಿಗಾಲ
ಮಳೆಗಾಲ ಎಲ್ಲವೂ ಒಂದೇ ..
ಹುಡುಗಿ ಜೊತೆಗೆ ಇದ್ದರೆ..?
 'ಚಳಿಗಾಲ' ಒಂದೇ ..!

ಪ್ರೀತಿ ಪವರ್


ಪ್ರೀತಿ ಪವರ್
ತಿರುಗುವ ಭೂಮಿ ನಿಂತರೂ
ನನ್ನ ಪ್ರೀತಿ ನಿಲ್ಲಲ್ಲ
ಚಂದಿರನ ಬೆಳದಿಂಗಳು ಖಾಲಿಯಾದರೂ
ನಿನ್ನ ನೆನಪುಗಳ ಹೊತ್ತ ನನ್ನ ಹೃದಯ ಖಾಲಿಯಾಗಲ್ಲ..!

ನಮ್ಮ ಸರ್.ಎಂ .ವಿಶ್ವೇಶ್ವರಯ್ಯನವರು


ಮುದ್ದೇನಹಳ್ಳಿಯಲ್ಲಿ ಮುದ್ದೆ ತಿಂದು ಬೆಳೆದವರು
ಭಾರತದ ರತ್ನ ,ಕನ್ನಡದ ಹೆಮ್ಮೆಯ ಪುತ್ರರಿವರು
ಆಣೆಕಟ್ಟು ಕಟ್ಟಿಸಿ ,ಹೊಲ ಗದ್ದೆಗೆ ನೀರು ಹರಿಸಿ, ರೈತರ ದೇವರಾದವರು
ಕತ್ತಲೆ ನಾಡಿಗೆ ವಿದ್ಯುತ್ ಬೆಳಕನ್ನು ಹರಿಸಿ ಮೇಧಾವಿಯಾದವರು
ತಂತ್ರಜ್ಞಾನಕ್ಕೆ ಹೊಸ ಮಂತ್ರ ಹೇಳಿಕೊಟ್ಟರಿವರು
ದಿವಾನರಾದರೂ ಸರಳ ಮಾನವರರಂತೆ ಬದುಕಿ ಮಾದರಿಯಾದವರು
ಅವರೇ
ನಮ್ಮ ಸರ್.ಎಂ .ವಿಶ್ವೇಶ್ವರಯ್ಯನವರು
ಕರ್ನಾಟಕದ ಹೆಮ್ಮೆಯ ಅಭಿಯಂತರು .!

Sunday, September 15, 2013

ಆಘಾತ


ಆಘಾತ
ಮನೆಗೆ ಒಂದಿಬ್ಬರು
ಅತಿಥಿ ಬಂದರೆ - ಸ್ವಾಗತ
ಮೂರ್ನಾಲ್ಕು ಜನ ಬಂದರೆ - ಸುಸ್ವಾಗತ
ತಂಡ ತಂಡವಾಗಿ ಬಂದರೆ - 'ಆಘಾತ'

ಪ್ರೇಯಸಿ

ಪ್ರೇಯಸಿ
ನೀ ನಕ್ಕರೆ
ಮರುಭೂಮಿಯಲ್ಲಿ ಮಳೆಬಂದಂತೆ..
ನೀ ಅತ್ತರೆ
ಹೇಳದೇ ಬರುವ ಸುನಾಮಿಯಂತೆ .!

ನಗು -ಅಳು


ನಗು -ಅಳು
ಸದಾ ನಕ್ಕರೆ
ಸಂಕಟ ಮಾಯ
ಸದಾ ಅತ್ತರೆ
ನೆಂಟ ಮಾಯ

ಜನರ ಪ್ರತಿಕ್ರಿಯೆ

ಜನರ ಪ್ರತಿಕ್ರಿಯೆ

ಗೆದ್ದರೆ  ಬಲು ಕೇಕೆ
     ಸೋತರೆ ಬರೀ 'ಟೀಕೆ '..!

Friday, September 13, 2013

ಮಾಯಾ ಲೋಕ ..! (ಕನಸಿನಿಂದ .. ಕನಸುಗಳವರೆಗೆ !)


Courtesy :Google Images

ಮಾಯಾ ಲೋಕ ..!
(ಕನಸಿನಿಂದ ಕನಸುಗಳವರೆಗೆ )

ಆಕಾಶದಲ್ಲಿನ ನಕ್ಷತ್ರ ಎಣಿಸುತ್ತ
ಬೆಳದಿಂಗಳ ಬೆಳಕನ್ನು ಸವಿಯುತ್ತ
ಜೋಡಿಯಾದವು ನನ್ನ ಕಣ್ಣ ರೆಪ್ಪೆಗಳು
ಶುರುವಾದವು ಸಣ್ಣ ಕನಸುಗಳು

ಓಡುತ್ತಿದ್ದವು ಅಲ್ಲಿ ಜೋಡಿ ಕಾಲುಗಳು
ಅವೆರಡರ ಹಿಂದೆ ಮತ್ತೆರಡು ಕಾಲುಗಳು
ಬದುಕಿಗಾಗಿ ನಡೆವ ಓಟವದು
ಬದುಕಲೇಬೇಕೆಂಬ ಹಠವದು ..
ವೇಗದಿ ಓಡುತಿದೆ 'ಕಾಲ'ವು  ಮುಂದೆ
'ಮಾನವ'ನ ಸವಾರಿ ಅದರ ಹಿಂದೆ ..
 ಓಡುತ ಓಡುತ ಬಲು ಜೋರಾಗಿ ,
ಮಲಗಿಹನು ಮಾನವ ಸುಸ್ತಾಗಿ ..

ಅವನ ಕಣ್ಣಿನ ಪರದೆ ಮುಚ್ಚಿತು
 ಕನಸಿನ ಪರದೆ ತೆರೆಯಿತು .

ಶಾಂತವಾಗಿ ಹರಿಯುತ್ತಿದೆ ಬದುಕೇಂಬ ಸಾಗರ
ತೆಪ್ಪದಲ್ಲಿ ಚಲಿಸುತ್ತಿರುವನು ಒಬ್ಬನೇ  ಸವಾರ
ತೆಪ್ಪ ಸಣ್ಣದಿರಲಿ ದೊಡ್ಡದಿರಲಿ
ಕಪ್ಪಿರಲಿ ಬಿಳಿಯಿರಲಿ
ಆ ಯಾತ್ರೆಗೆ ಭಂಗವಿಲ್ಲ ..
ಇಲ್ಲ ಅಲ್ಲಿ  ಒತ್ತಡ , ಅವಸರ
'ಸಾಕು 'ಎನ್ನುವ ಬೇಸರ ..
ಆ ಯಾತ್ರೆ ಅಷ್ಟೊಂದು ಸುಂದರ
ಮೈ ಮರೆತು ಮಲಗಿದನು ಸವಾರ

ಕಾಲಿಟ್ಟನು ಅವನು ಕನಸಿನ ಲೋಕಕ್ಕೆ
ಸಿದ್ದನಾದನು ಮಾಯಾ ಓಟಕ್ಕೆ ..!

ಓಡುತ್ತಿದ್ದವು ಅಲ್ಲಿ ಜೋಡಿ ಕಾಲುಗಳು
ಅವೆರಡರ ಹಿಂದೆ ಮತ್ತೆರಡು ಕಾಲುಗಳು
ಬದುಕಿಗಾಗಿ ನಡೆವ ಓಟವದು
ಬದುಕಲೇಬೇಕೆಂಬ ಹಠವದು ..
ವೇಗದಿ ಓಡುತಿದೆ 'ಕಾಲ'ವು  ಮುಂದೆ
'ಮಾನವ'ನ ಸವಾರಿ ಅದರ ಹಿಂದೆ ..

ಆ ಸಾಗರದಿ , ಬಿರುಗಾಳಿ ಬೀಸಲು ಲಘುವಾಗಿ
ಬಂದ ಆ ಸವಾರ ಕನಸಿನ ಲೋಕದಿಂದ ಹಿಂದ್ತಿರುಗಿ .

ಬಡಿದೆಬ್ಬಿಸಿತು ಕಾಲವು
ಚಾಟಿಯೇಟು ಕೊಟ್ಟು
ಮತ್ತೆ ಅವನದು ಓಟವು
ಎಲ್ಲ ಕನಸವ ಬಿಟ್ಟು ..

ಚಂದ್ರ ಹೋಗಿದ್ದ
ಅವರಣ್ಣ ಬಂದಿದ್ದ ..
ಹಗಲು ಕಾಣುವ ನಕ್ಷತ್ರದಿಂದ 
ಹೊರಬಂದೆನು ನಾ ಆ ಕನಸಿನಿಂದ ..!















Wednesday, September 4, 2013

ಬಾಲಕಾರ್ಮಿಕರು ..!

Photo Courtesy : Google Images



     ಬಾಲಕಾರ್ಮಿಕರು ..!
 ಒಬ್ಬ ಬಾಲಕ
ಮುಗ್ದ ಮನಸ್ಸು ; ದೊಡ್ಡ ಕನಸು
ನೋಡಲು ಅವನು ತುಂಬಾ ಸೊಗಸು
ಅಕ್ಷರ ಕಟ್ಟಲು ಕನಸೊಂದ ಕಂಡಿದ್ದ
ಮನೆ ಕಟ್ಟುವ ಆಳಾಗಿ ದುಡಿಯುತಲಿದ್ದ ..!
 ಇನ್ನೊಬ್ಬ ಬಾಲಕ
ನೋಡಲು ತುಂಬಾ ಕೊಳಕ
ಪೆನ್ಸಿಲ್ ಹಿಡಿಬೇಕಾದವನು ,
ಪಂಕ್ಚರ್ ಅಂಗಡಿಲಿ ಟೈಯರ್ ಹಿಡಿಯುತಿರುವನು ..
 ಇಲ್ಲೊಬ್ಬ  ಬಾಲಕ
ಮಾತಡುವದರಲ್ಲಿ ತುಂಬಾ ಚಾಲಾಕ
ಸ್ಲೇಟು ನಲ್ಲಿ ಅಕ್ಷರ ಕಾಣಬೇಕಿದ್ದವನು,
ತೊಳೆಯುವ ಪ್ಲೇಟು ನಲ್ಲಿ ಭವಿಷ್ಯ ನೋಡುತಿರುವನು..
 ಅಲ್ಲೊಬ್ಬ ಬಾಲಕ
ಹಣೆಯ ಮೇಲೆ ಕೆಂಪು ತಿಲಕ
ಮನೆಯಲ್ಲಿ ವಾಸವಾಗಿರಬೇಕಾದವನು
ಮಠದಲ್ಲಿ ಯಾವದೋ ಗುರುವಿಗೆ ದಾಸನಾಗಿರುವನು ..
 ಕೊನೆಗೊಬ್ಬ ಬಾಲಕ
ಹಾಕಿರುವನು ಕನ್ನಡಕ
ಬರೆಯಬೇಕಿತ್ತು ಅವನು ಕೈಯಲ್ಲಿ ಹಿಡಿದು ಪೆನ್ನನ್ನು
ಸಂತೆಯಲ್ಲಿ ಮಾರುತ ನಿಂತಿಹನು  ಬಲೂನು
ಇವರೆಲ್ಲ ಬರೀ ಬಾಲಕರಲ್ಲ
ಬಾಲಕಾರ್ಮಿಕರು ..
 ಎಷ್ಟೇ ಇದ್ದರೂ ನಿಮ್ಮ ಹತ್ತಿರ MONEY
ಕೇಳಲಿ ನಿಮ್ಮ ಕಿವಿಗೂ ಬಾಲಕಾರ್ಮಿಕರ ಧ್ವನಿ...