ಇಷ್ಟೆಲ್ಲಾ ಇದೆ ..

Saturday, March 21, 2015

ಮರೆಯದ ದಿನಗಳು..

ಮರೆಯದ ದಿನಗಳು..
ಬದುಕಿನಲಿ ನಾವು ಹಲವು ಘಟನೆಗಳಿಂದ ಕುಗ್ಗಿ ಹೋಗುತ್ತೇವೆ. ಅದರಿಂದ ಹೊರಬರಲು ಹೆಚ್ಚು ಕಷ್ಟ ಪಡುತ್ತೇವೆ. ಆದರೆ ನಮ್ಮ ಜೀವನವು ಸೋಲು ಗೆಲವು ಗಳಿಂದ ಎಂಬುವುದನ್ನು ನಾವು ಮರೆಯಬಾರದು. ನನ್ನ ಜೀವನದಲ್ಲೂ ನಾನು ಅನೇಕ ಬಾರಿ ಮನಸಿನ ಮೇಲೆ ನೊವುಆಗುವುದನ್ನು ಅನುಭವಿಸಿದ್ದೇನೆ . ಆದರೆ ಕಾಲವೇ ನನ್ನನ್ನು ಅದರಿಂದ ಪಾರುಮಾಡಿತು. ನನ್ನ ಜೀವನದಲ್ಲಿ ಮರೆಯಲಾಗದ ಘಟನೆ ಎಂದರೆ , ನಾನು ಪಿಯುಸಿ ಯಲ್ಲಿರಬೇಕಾದರೆ ನನಗೆ ಗಣಿತ ವಿಷಯದಲ್ಲಿ ತುಂಬಾ ಕಡಿಮೆ ಅಂಕಗಳು ಬರುತ್ತಿದ್ದವು. ಎಷ್ಟು ಸಲಿ ಓದಿದರೂ ನನಗೆ ಕಡಿಮೆ ಅಂಕಗಳು ಬರುತ್ತಿದ್ದವು. ಆದರೆ ನನಗೆ ಅದರ ಮೇಲಿನ ಆಸಕ್ತಿ ಕಡಿಮೆಯಾಗಲಿಲ್ಲ. ಆದರೂ ಪ್ರತಿ ಸಲ ಕಡಿಮೆ ಅಂಕ ಬಂದಾಗ ನನಗೆ ತುಂಬಾ ಬೇಜಾರು ಆಗುತ್ತಿತು.

ಪ್ರತಿ ರವಿವಾರ ಪರೀಕ್ಷೆ ಇಡಲಾಗುತ್ತಿತ್ತು. ನನಗೆ ರಾಸಾಯನಿಕ ಮತ್ತು Physics  ವಿಷಯಗಳಲ್ಲಿ ನನಗೆ ಎಚ್ಚು ಅಂಕಗಳು ಬರುತ್ತಿದ್ದವು ಆದರೆ ಕೇವಲ ಗಣಿತದಲ್ಲಿ ಮಾತ್ರ ನನಗೆ ಕಡಿಮೆ ಅಂಕಗಳು ಬರುತ್ತಿದ್ದವು. ಅಷ್ಟಕ್ಕೂ ನಾನು ಆ ವಿಷಯವನ್ನು ಹೆಚ್ಚು ಸಲ ಓದುತ್ತಿದೆ ಆದರೂ ನನಗೆ ಹೆಚ್ಚು ಅಂಕಗಳು ನನಗೆ ಬರುತ್ತಿರಲಿಲ್ಲ.

ಒಂದು ದಿನ ನನಗೆ ಕೇವಲ ೫೬ ಅಂಕ ಬಂದಿತ್ತು ೧೦೦ ಅಂಕಗಳಿಗೆ, ಉಳಿದ ಎಲ್ಲ ವಿಷಯಗಳಲ್ಲಿ ನನಗೆ ೮೦ ಅಂಕಗಳಿಂದ ಹೆಚ್ಚು ಅಂಕ ಬರುತ್ತಿತ್ತು, ಇದರಿಂದ ನಂಗೆ ಹೆಚ್ಚು ಬೇಜಾರು ಆಗುತ್ತಿತು. ಆದರೂ ನನಗೆ ಹೆಚ್ಚು ಅಂಕ ತೆಗಿಯಬೇಕೆಂಬ ಹಠ ಬಿಡಲಿಲ್ಲ. ಒಂದು ದಿನ ನಾನು ನಿಶ್ಚಿಯಿಬಿತ್ತೆ. ನನಗೆ ಉಳಿದ ವಿಷಯಗಳಲ್ಲಿ ಕಡಿಮೆ ಬಂದರೂ ಈ ಗಣಿತ ವಿಷಯದಲ್ಲಿ ಮಾತ್ರ ಹೆಚ್ಚು ಅಂಕ ಬರಲೇಬೇಕು ಎಂಬ ಪಣ ತೊಟ್ಟೆ. ಅದರಂತೆ ಓದತೊಡಗಿದೆ

ಆಗ ನನ್ನು ಹಾಸ್ತಲ್ನಲ್ಕಿ ಇದ್ದೆ. ನನ್ನ ಗೆಳೆಯರೊಂದಿಗೆ ಹೆಚ್ಚು ಕಾಲ ಕಳೆದು ಅವರೊಂದಿಗೆ ನಾನು ಗಣಿತ ಕಲಿಯಲು ಪ್ರಾರಂಭ ಮಾಡಿದೆ. ಅವರು ಬೆಜಾಉ ಮಾಡಿಕೊಳ್ಳದೆ ನನಗೆ ಗಣಿತದ ಕೆಲವು ಕಟಿಣ ಕಾಂಸೆಪ್ತ್ಸ್ ಗಳನ್ನೂ ಸರಳವಾಗಿ ಅರ್ಥವಾಗುವ ಹಾಗೆ ಹೇಳತೊಡಗಿದರು. ಅದರಂತೆಏ ನಾನು ಹೆಚ್ಹು ಹೆಚ್ಚು ಓದತೊಡಗಿದೆ.
ಒಂದು ದಿನ ನನಗೆ ೧೦೦ ಅಂಕಕ್ಕೆ ೮೨ ಅಂಕ ಬಂದಿತ್ತು . ಅದು ನನ್ನ ಮೊದಲ ಗೆಲುವು. ಅದು ನನಗೆ ಎಚ್ಚು ಧೈರ್ಯ ತುಂಬಿತ್ತು. ಮತ್ತೆ ಮತ್ತೆ ಹೆಚ್ಚು ಓದತೊಡಗಿದೆ.

ರವಿ ಅಂತ ಒಬ್ಬ ನನ್ನ ಸ್ನೇಹ್ತಿತ ಹಾಗೂ ಬಂಟಿ ಅಂತ ಇನ್ನೊಬ್ಬ ಸ್ನೇಹಿತ ಇವರಿಬ್ಬರೂ ನನಗೆ ಹೆಚ್ಚು ಗಣಿತ ವಿಷಯಗಳನ್ನು ಹೇಳತೊಡಗಿದರು. ನಾನು ಕಲಿಯತೊಡಗಿದೆ. ಒಂದಾದಮೇಲೆ ಪರೀಕ್ಷೆಯಲ್ಲಿ ಉತ್ತಮ ಉತ್ತಮ ಅಂಕಗಳನ್ನು ಪಡೆಯತೊಡಗಿದೆ.

ದಿನಕ್ಕೆ ನಾನು ೨ ರಿಂದ ಮೂರು ತಾಸುಗಳ ವರೆಗೆ ಗಣಿತ ಅಭ್ಯಾಸ ಮಾಡತೊಡಗಿದೆ. ಇದರಿಂದ ನನಗೆ ಹೆಚ್ಚು ಆತ್ಮವಿಶ್ವಾಸ ಬರತೊಡಗಿತು. ಅದರಂತೆಯೇ ಹೆಚ್ಚು ಹೆಚ್ಚು ಲೆಕ್ಕಗಳನ್ನು ಬಿಡಿಸಿ ನನ್ನ ಆತ್ಮವಿಶ್ವಾಸವನ್ನು ಹೆಚ್ಸಿಸತೊಡಗಿದೆ.

ಆದಾಗಲೇ ನನ್ನ ಪಿಯುಸಿಯ ಪರೀಕ್ಷೆ ಆರಂಭವಾಯಿತು. ಪ್ರತಿದಿನವೂ ಗಣಿತದ ಮೇಲೆ ಹೆಚ್ಚು ವತ್ತಡ ಕೊಟ್ಟು ನನ್ನು ಓದತೊಡಗಿದೆ. ಪರೀಕ್ಷೆಯೂ ಮುಗಿಯಿತು. ಪರಿಕ್ಷೆಯಲ್ಲ್ಲಿ ನನ್ನು ಉತ್ತಮವಾಗಿ ಬರೆದಿದ್ದೆ. ರಿಸಲ್ಟ್ಸ್ ಆಗಿ ಕಾಯುತ್ತಿದೆ.

ಕೊನೆಗೂ ಪರೀಕ್ಷೆಯ ರಿಸಲ್ಟ್ಸ್ ಬಂದಿತು. ನನಗೆ ಗಣಿತದಲ್ಲಿ ೯೫ ಅಂಕ ಬಂದಿತ್ತು!! ನನ್ನ ಖುಷಿಯನ್ನು ಹೇಳಲು ಮಾತುಗಳೇ ಬಾರದಿದ್ದವು.

ಒಂದು ಕಷ್ಟದ ವಿಷಯಗಳನ್ನು ನಾವು ಹೆದರಿಕೊಂಡು ನಾವು ಅದರಿಂದ ದೂರವಿದ್ದರೆ ನಮಗೆ ಏನನ್ನು ಸಾಧಿಸಲು ಆಗುವುದಿಲ್ಲ ಅದನ್ನು ಹೆದುರಿಸಿ ಅದನ್ನು ಗೆಲ್ಲಲ್ಲು ಏನು ಮಾಡಬಹುದೋ ಅದನ್ನು ಮಾಡಲೇಬೇಕು.
ಒಂದು ಸೋಲು ಇನ್ನೊದು ಸೋಲಿಗೆ ಕರನವಾಗಬರದಷ್ಟೇ. ಗೆಲುವನ್ನು ಬೆನ್ನು ಹತ್ತಿದವನಿಗೆ ಯಾವುದೇ ನೋವುಗಳು ಬರಬಾರದು. ಅವುಗಳನ್ನು ತಡೆದುಕೊಂಡು ನಾವು ಜೀವಿಸಬೇಕು.

ಒಂದು ಗೆಲವು ನಮ್ಮನ್ನು ಕ್ಷುಇಗೊಲಿಸುತ್ತದೆ ಆದರೆ ಒಂದು ಸೋಲು ನಮಗೆ ಬದುಕಿನ ಪಾಠ ಹೇಳಿಕೊಡುತ್ತದೆ.
ಎನೆಯಾದರೂ ಕಷ್ಟದ ಹಿಂದೆ ಸುಖವಿದ್ದೆಇರುತ್ತಾದೆ. ನಾವು ಅ ಘಳಿಗೆಗೆ ಕಾಯಲೇಬೇಕು ಅಲ್ಲದೆ ನಾವು ಬದುಕಿನ ಎಲ್ಲ ಅನುಭವಗಳನ್ನು ನಾವು ಅನುಭವಿಸಲೇಬೇಕು ಅಂದರೆ ಮಾತ್ರ ನಾವು ಬದುಕಿನ ಮೌಲ್ಯವನ್ನು ಅರಿತುಕೊಳ್ಳುತ್ತೇವೆ
ಹೀಗೆ ನಮಗೆಲ್ಲರಿಗೂ ಒಂದಲ್ಲ ಒಂದು ಅಡೆತಡೆಗಳು ಬರುತ್ತವೆ. ನಾವು ಅವುಗಳನ್ನು ಮೀರಿ ಬದುಕಿನಲಿ ನಮ್ಮ ಗುರಿಗಾಗಿ ಹೋರಾಡಬೇಕು. ಸಣ್ಣ ಸಣ್ಣ ಗೆಲುವನ್ನು ಒಗ್ಗೂಡಿಸಿ ಬದುಕಿನ ದೊಡ್ಡ ಗುರಿಗಾಗಿ ಶ್ರಮಿಸಬೇಕು.

ಮೊನ್ನೆ Housing.com  https://housing.com/lookup ಅವರ Look Up.ವಿಡಿಯೋ ನೋಡಿದ ಮೇಲೆ . ಈ ಘಟನೆ ನೆನಪಾಯಿತು.
ನಾಳೆಯಾ ಭರವಸೆಯ ದಿನಗಳು ನಮ್ಮದಾಗಬೇಕಾದರೆ ನಾವು ತಾಳ್ಮೆ ಕಾಪಾಡಿಕೊಳ್ಳಬೇಕು.
ಒಂದು ಸಣ್ಣ ಘಟನೆಗೆ ನಮ್ಮನ್ನು ಮತ್ತೆ ಗೆಲುವಿನ ಹತ್ತಿರ ಕರೆದೊಯ್ಯುತ್ತದೆ .
ನಿಮ್ಮ ಜೀವನದಲ್ಲಿನ ಅತ್ಯಂತ ಗೆಲುವಿನ ಸಮಯವನ್ನು ಮೊತ್ತೊಮ್ಮೆ ಮೆಲಕು ಹಾಕಿ ಹಾಗೂ ನಿಮ್ಮ ಜೀವನದ ಆ ಮರೆಯಲಾಗದ ನೆನಪನ್ನು ನೀವು ತಿಳಿಸಿ.ಆ ನೆನಪನ್ನು ಮೊತ್ತೊಮ್ಮೆ ಜೀವಿಸಿ.ಹಳೆ ನೆನಪು ಮರೆತು ಮತ್ತೆ ಜೀವಿಸಲು. ಅಂತಹ ಸಮಯದಲ್ಲಿ ನಮ್ಮ ಎದೆಯಲ್ಲಿ ಹೊಸದೊಂದು ಬೆಳೆಕು ಸಂಚರಿಸುತ್ತದೆ. ಅಂಧಕಾರದಿಂದ ಹೊರತಂದ ಬೆಳಕದು. ಅಂತ ಬೆಳಕು ನಮ್ಮದಾಗಬೇಕಾದರೆ ನಮ್ಮಲ್ಲಿ ಕ್ರಾಂತಿ ಮೂಡಬೇಕು. ಒಂದು ಸಂಚಲನ ಉಂಟಾಗಬೇಕು ಆವಾಗ ಮಾತ್ರ ನಾವು ಹೊಸಬರಾಗಲು ಸಾಧ್ಯ ಹಾಗೂ ಏನಾದರೂ ಸಾಧಿಸಲು ಸಾಧ್ಯ.


























No comments:

Post a Comment