ಇಷ್ಟೆಲ್ಲಾ ಇದೆ ..

Wednesday, November 13, 2013

ಕೇಳೋ ಮಂಕುತಿಮ್ಮ ಕೇಳು !


ಕೇಳೋ ಮಂಕುತಿಮ್ಮ ಕೇಳು
ಹುಟ್ಟು ಸಾವಿನ ಅಂತರ ನೀ ಕೇಳು
ಹುಟ್ಟು ಒಂದು ಗೆರೆ
ಸಾವು ಒಂದು ಗೆರೆ
ಅವರೆಡರ ನಡುವೆ ಮೂಡಿಸುವ ಬರಹಗಳೇ ನಮ್ಮ ಬದುಕು !

ಕೇಳೋ ಮಂಕುತಿಮ್ಮ ಕೇಳು
ಮೂರು ದಿನದ ಆಟ ಬಾಳು
ಗೆಲವು ಸೋಲಿನ ಹೋರಾಟ
ನೋವು ನಲಿವುಗಳ ಮಾರಾಟ
ಏನೆಯಾದರೂ ನಿಲ್ಲದು 'ಓಟ' ಬದುಕು

ಕೇಳೋ ಮಂಕುತಿಮ್ಮ ಕೇಳು
ಕನಸುಗಳ ಮಳಿಗೆಯಿಂದ ನೀ ಏಳು
ನಿನ್ನೆಲ್ಲಾ ಕನಸುಗಳು ನನಸಾಗದು
ಆದರೂ ನಿನ್ನ ಪ್ರಯತ್ನ ನಿಲ್ಲಬಾರದು
ಒಂದು ಸುಂದರ ಕನಸು - ನಮ್ಮ ಬದುಕು

ಕೇಳೋ ಮಂಕುತಿಮ್ಮ ಕೇಳು
ಜಾತ್ರೆಯ ಹಾಗೆ ನಮ್ಮ ಬಾಳು
ನೀನೇನೆ ಇಲ್ಲಿ  ಕೊಂಡರೂ
ನಿನ್ನನ್ನೇ ನೀ ಮಾರಿಕೊಂಡರೂ
ನಿನ್ನ ಗಳಿಕೆ ಇಲ್ಲಿ ಶೂನ್ಯ

ಶೂನ್ಯವನ್ನು ಶೋಧಿಸುವುದೇ  ನಮ್ಮ ಬದುಕು !


Sunday, November 3, 2013

ನಾವು ಕನ್ನಡಿಗರು


ನಾವು ಕನ್ನಡಿಗರು 
ಬಾಯಿ ಹೊಲದ್ರು ಮೂಗಲ್ಲಿ ಮಾತಡ್ತಿವಿ ಕನ್ನಡ ಭಾಷೆ
ಎಷ್ಟೇ ಮಾತಾಡಿದ್ರು ತಿರೋದಿಲ್ಲ ಭಾಷೆಯ ತೃಷೆ
ಇಲ್ಲಿ ಹುಟ್ಟುವುದೇ ಪುಣ್ಯ ; ಸ್ವರ್ಗದ ಹಾಗೆ ಕರುನಾಡು

ಮಣ್ಣಿನ ಕಣಕಣದಲ್ಲೂ ಕೇಳುತಿದೆ ಕಸ್ತೂರಿ ಕನ್ನಡದ ಹಾಡು

Saturday, November 2, 2013

ದೀಪಾವಳಿ

ದೀಪಾವಳಿ'

ಮನೆಯ ದೀಪ ಹಚ್ಚುವುದು ದೈನಂದಿನ ದೃಶ್ಯಾವಳಿ
ಮನದ ದೀಪ ಹಚ್ಚುವುದೇ ನಿಜವಾದ 'ದೀಪಾವಳಿ'
ಮನೆಯ ಹಾಗು ಮನದ ದೀಪಗಳೇರಡು ಹಚ್ಚೋಣ
ಎಲ್ಲ ಜೀವಕುಲದ ಬಾಳಿಗೆ ಬೆಳಕು ಚೆಲ್ಲೋಣ..

Friday, November 1, 2013

ಎಲ್ಲಿದೆ..?

ನಾನು ಅಂತಮೂರ್ಖಿಯಾದಾಗ ನನ್ನ ಕಾಡುವ ಪ್ರಶ್ನೆಗಳು ..


ಎಲ್ಲಿದೆ..?


ಎಲ್ಲಿದೆ ಬಣ್ಣವಿಲ್ಲದ ಬದುಕು
ಎಲ್ಲಿದೆ ಅಂಧತ್ವ ದೂರ ಮಾಡುವ ಬೆಳಕು
ಎಲ್ಲಿದೆ ಸಾವಿಲ್ಲದ ,ನೋವಿಲ್ಲದ ಜೀವ
ಎಲ್ಲಿದೆ ಏನನ್ನು ಆಪೇಕ್ಷಿಸದ ಭಕ್ತಿಭಾವ

ಎಲ್ಲಿದೆ ತಾಯ್ತನ ಮರೆತ ಹೆತ್ತ ಕರಳು
ಎಲ್ಲಿದೆ ಸತ್ಯ ಹೇಳುವ ಪಡಿನೆರಳು
ಎಲ್ಲಿದೆ ನಾವಾಡುವ ಮಾತಿನಲ್ಲಿ ನಿವೇದನೆ
ಎಲ್ಲಿದೆ ನಮ್ಮ ಕರ್ತವ್ಯದ ಸಂವೇದನೆ

ಎಲ್ಲಿದೆ ಮಾತನಾಡುವ ಮೌನ
ಎಲ್ಲಿದೆ ಒಪ್ಪಿ,ಅಪ್ಪಿ ನೀಡುವ ಸನ್ಮಾನ
ಎಲ್ಲಿದೆ ನಾನು-ನನ್ನದೆನ್ನುವದಕ್ಕೆ ಕಾರಣ
ಎಲ್ಲಿದೆ ಸಾವಿಗೂ ನೀಡುವ ಆಮಂತ್ರಣ

ಎಲ್ಲಿದೆ ದೇಹ ಮನಸಿಗೂ ಅಂತರ
ಎಲ್ಲಿದೆ ಬದಲಾವಣೆ ತರೋ ಮನ್ವಂತರ
ಎಲ್ಲಿದೆ ಸೋಲು ನೋಡದ ಗೆಲವು
ಎಲ್ಲಿದೆ ನೋವು ನೀಡದ ಒಲವು

ಎಲ್ಲಿದೆ ಎಲ್ಲ ತಿಳಿಸುವ ಪುಸ್ತಕ
ಎಲ್ಲಿದೆ ಎಲ್ಲ ಬುದ್ಧಿ ಇರುವ ಮಸ್ತಕ
ಎಲ್ಲಿದೆ ಎಲ್ಲ ಮೀರುವ ಎತ್ತರ
ಎಲ್ಲಿದೆ ಇಲ್ಲಿ ಎಲ್ಲ ಪ್ರಶ್ನೆಗೆ ಉತ್ತರ..?