ಇಷ್ಟೆಲ್ಲಾ ಇದೆ ..

Saturday, March 21, 2015

ನಿಜವಾದ ಸಂತೋಷ


ನಿಜವಾದ ಸಂತೋಷ

ನಾವು ಪಡುವ ಸಂತೋಷಗಳು ನಮ್ಮ ದುಃಖಕ್ಕೂ ಕಾರನವಾಗುದು ಎಂಬ ಮಾತಿದೆ. ಆಗಿದ್ದರೆ ನಿಜವಾದ ಸಂತೋಷವೆಂದರೆ ಏನು ?? ಮನುಷ್ಯ ಯಾವಾಗ ಸಂತೋಷವಾಗುತ್ತಾನೆ ? ಅವನಿಗೆ ಏನು ಸಿಕ್ಕರೆ ಸಂತ್ಹೊಶವಾಗುತ್ತಾನೆ ?  ನಿಜವಾದ ಸಂತೋಷ ಪಡೆಯುವುದಾದರೂ ಹೇಗೆ ? ಎಂಬ ದ್ವಂದ್ವ ವಿಚಾರಗಳು ನಮ್ಮನು ಕಾಡುತ್ತವೆ. ಆದರೆ ಆ ಸಂತೋಷ ನಮ್ಮಲ್ಲಿಯೇ ಇದೆ ಎಂಬುದು ಅಪ್ಪಟ ಸತ್ಯ.


ಸಂಬಳ ಜಾಸ್ತಿ ಆದಾಗ , ಮೊದಲ ಪ್ರೀತಿಯಾದಾಗ , ಮೊದಲ ಕ್ರುಶ್ ಮಾತಾಡಿಸಿದಾಗ, ಅಪ್ಪನ ಕೂಡಿಸಿಕೊಂಡು ಬೈಕ್ ಮೇಲೆ ಸವಾರಿ ಮಾಡಿದಾಗ ,ಅಮ್ಮನ ಸೀರೆ ಉಟ್ಟುಕೊಂಡಾಗ, ಅಣ್ಣನ ಜೊತೆ ಜಗಳವಾಡಿ ಮತ್ತೇ ಮಾತಾಡಿದಾಗ, ಅಕ್ಕನ ಅಕ್ಕರೆ ಸಿಕ್ಕಾಗ, ತಂಗಿಗೆ ಉಡುಗೊರೆ ಸಿಕ್ಕಾಗ, ಸಿಲ್ಕ್ ಚೋಚ್ಕಲ್ತೆ ಕೊಟ್ಟಾಗ, ಅವಳಿಂದ ಸಿಹಿ ಮುತ್ತು ಸಿಕ್ಕಾಗ , ಹಬ್ಬದ ದಿನದೊಂದು ಮನೆಮಂದಿ ಸೇರಿದಾಗ . ಊರ ಜಾತ್ರೆಗೆ ಗೆಳೆಯರೊಂದಿಗೆ ಹೋದಾಗ , ಬಾಲ್ಯದಲ್ಲಿ ಜಾತ್ರೆಯಲ್ಲಿ ಕಳೆದು ಹೋಗಿ ಮತ್ತೇ ಅಮ್ಮನ ಮಡಿಲು ಸೇರಿದಾಗ, ಅಪ್ಪನ ಜೊತೆ ಹೊಲಕ್ಕೆ ಹೋದಾಗ , ಒಳ್ಳೆ ಅಂಕ ಪಡೆದು ಊರುತುಂಬಾ ನೀವು ಸುದ್ದಿ ಆದಾಗ , ಪರಿಚಯವಿರದ ನಳುಚೆಂದದ ಹುಡುಗಿ ನಿಮ್ಮ ನಂಬರ್ ಕೇಳಿದಾಗ , ಅಮ್ಮನ ಮಡಿಲ ಮೇಲೆ ಮಲಗಿದ್ದಾಗ , ಊಟ ಮಾಡಲು ಬೇಸರವೆನಿಸಿ ಅಮ್ಮನ ಕೈತುತ್ತಲೇ ಊಟ ಮಾಡಿದಾಗ , ಸಚಿನ್ ಸೆಂಚುರಿ ಹೊದೆಯ್ಕುವುದನ್ನು ನೋಡಿದಾಗ , ರಾಷ್ಟ್ರಗೀತೆ ಕೇಳಿದಾಗ , ಮಾತೃಭಾಷೆಯಲ್ಲೇ ಮಾತಾಡುವಾಗ, ಮೊದಲ ಕೆಲಸ ಸಿಕ್ಕಾಗ . ಮೊದಲ ಸಂಬಳ ಬಂದಾಗ,
ನಮಗೆ ಇಷ್ಟವಾಗುವ ಒಂದು ಸಿನೆಮಾ ನೋಡಿದರೆ, ಅಚ್ಚು ಮೆಚ್ಚಿನ ಗಾಯಕನ ಎದುರುಗದೇನೆ ಸಿಕ್ಕರೆ , ಇರುಲಿನಲ್ಲಿ ಖಾಲಿ ಇರುವ ರೋಡಿನಲ್ಲಿ ಬೈಕಿನ ಮೇಲೆ ಅತೀ ವೇಗವಾಗಿ ಹೋಗುವಾಗ, ಮಳೆಬಂದು ನಿಂತು ಆ ಸಿಹಿನ್ ತಂಗಾಳಿಯಲಿ ಸುಮ್ಮನೆ ನಡೆಕೊಂಡುವಾಗ, ಕಡಲ ತೀರದ ಅಲೆಗಳ ಸದ್ದನ್ನು ಮೌನದಲ್ಲೇ ಆಲಿಸುತ್ತಿರುವಾಗ ಕಡಲಾ ಅಲೆಗಳು ಬಂದು ನಿಮ್ಮ ಪಾದ ಸವರಿದಾಗ , ನಿಮ್ಮನ್ನು ತಮ್ಮತ್ತ ಸೆಳೆದಂತೆ ಭಾಸವಾದಾಗ , ಕಡಲ ತೀರದಿ ನಡೆಯುತ್ತಾ ನೀವು ಬಿಟ್ಟ ಹೆಜ್ಜೆ ಗುರುತುಗಳು ಅಲೆಗಳು ಅಳಿಸುವುದನ್ನು ಕಂಡಾಗ,  ಮೊದಲ ಸಂಬಳದಲ್ಲಿ ಅಪ್ಪ ಅಮ್ಮನಿಗೆ ಉಡುಗೊರೆ  ಕೊಟ್ಟಾಗ , ಮೆಚ್ಚಿನ ಗೆಳೆಯ/ಗೆಳತಿಯ ಹುಟ್ಟುಹಬ್ಬವನ್ನು ಆಚರಿಸುವಾಗ, ದೂರದಲ್ಲಿರುವ ಸ್ನೇಹಿತೆ/ ಸ್ನೇಹಿತನೊಂದಿಗೆ  ಮಾತನಾಡುವಾಗ,  ಫೇಸ್ಬುಕ್ ನಲ್ಲಿ ನಿಮ್ಮ ಫೋಟೋ ಗೆ ಹೆಚ್ಚು ಹೆಚ್ಚಿ ಲೈಕ್ ಬಂದಾಗ, ನಿಮ್ಮ ಕೆಲಸ ಮೆಚ್ಚಿ ನಿಮ್ಮ ಮ್ಯಾನೇಜರ್ ಶಹಭಾಶ್ ಗಿರಿ ಕೊಟ್ಟಾಗ., ನಿಮ್ಮ ಗೆಳತಿಯೊಂದಿಗೆ ಬೈಕ್ನಲ್ಲಿ ಸುತ್ತುವಾಗ ,ಗೆಳೆಯರೊಂದಿಗೆ ಟ್ರಿಪ್ ಹೋದಾಗ, ಬಾಲ್ಯದ ಸ್ನೇಹಿತ ಧಿಡಿರನೆ ಬಸ್ ಸ್ಟಾಪ್ ನಲ್ಲಿ ಸಿಕ್ಕಾಗ ,

ಈ ಎಲ್ಲ ಅನುಭವಗಳು ನಮಗೆ ಅತ್ಯಂತ ಖುಷಿಕೊಡುತ್ತವೆ.  ಈ ಪುಟ್ಟ ಪುಟ್ಟ ಸಂತೋಷಗಳು ನಮ್ಮನ್ನು ಪುಟ್ಟ ಮಗುವಿನ ಮನಸಿನಾಗಿಸುತ್ತವೆ.. ನಾವು ಇಂದು ಏನೇ ಆದರು ಆ ಪುಟ್ಟ ಕನಸುಗಳು ಎಲ್ಲವನು ಮರೆಸಿ ನಿಜವಾದ ಸಂತೋಷ ಪಡಿಸುತ್ತವೆ. ನಾವು ಏನೇ ಅಂದರೂ ನಮ್ಮ ಮನಸನು ನಾವು ಎಂದಿಗೂ ಮಗುವಿನ ಹಾಗೆ ಇತ್ತು ಕೊಳ್ಳಬೇಕು. ನಾವು  ಎಲ್ಲವನ್ನು ಅನುಭವಿಸಬೇಕು, ಅನುಭವದ ಸುಖವನ್ನು ಅನುಭವಿಸಿಯೇ ತಿಳಿಯಬೇಕು.

ಈ ಬದುಕು ಸುಂದರ ಇಲ್ಲಿ ಎಲ್ಲವೂ ನಶ್ವರ. ಹುಟ್ಟು ಸಾವಿನೊಳಗೆ ನಾವು ಬದುಕುವ ಈ ಜೀವನ ಕೆಲವ ಓಪಚಾರಿಕ ವಾಗದೆ ಒಂದು ಸುಂದರ ಬದುಕು ಕಟ್ಟಿಕೊಳ್ಳುವ ಪ್ರಯತ್ನ ಮಾಡಬೇಕು
ನಮ್ಮ ಅನುಭವಗಳೇ ನಮಗೆ ಪಾಠವಾಗುತ್ತವೆ. ಆ ಪಾಠಗಳಿಂದಲೇ ನಾವು ಬದುಕನ್ನು ಎಚ್ಚರದಿಂದ ಬದುಕ ಬೇಕು. ಒಂದು ಇರುವೆಗೂ ಒಂದು ಬದುಕಿದೆ. ಆದರೆ ಬುದ್ಧಿಜೀವಿ ಅನಿಸಿಕೊಂಡ ನಾವು ಭುದ್ದಿಗೆಡಿ ತರ ಬದುಕುತಿದ್ದೇವೆ. ನಮ್ಮ  ಬದುಕು ತೀರುವುಗಳನ್ನೂ ಪಡೆದು ಇನ್ನು ಸುಂದರವಾಗುತ್ತದೆ. ಬದಲಾವಣೆ ಜಗದ ನಿಯಮ ಆದರೆ ನಾವು ನಮ್ಮ ತಾಣವನ್ನು ಕಳೆದುಕೊಳ್ಳದೆ , ನಮ್ಮ ರೀತಿಯಂತೆ ಬದುಕಿ ನಮ್ಮ ಸಿದ್ದಾಂತಗಳನ್ನೂ ಗಾಳಿಗೆ ತೋರದೆ , ನಮ್ಮೆ ಅದ ಸಿಂಹನಡೆ ನಡೆದು ಬದುಕು ಸಾಗಿಸಬೇಕು

ನಕ್ಕಷ್ಟು ನಮ್ಮ ಆಯಸೂ ಜಾಸ್ತಿ ಆಗುತ್ತಂತೆ . ಬದುಕಿನ ಅನುಭವಗಳಿಗೆ ಒಂದೇ ತೆರನಾದ ಮನಸ್ಥಿತಿ ಬೆಳೆಸಿಕೊಂಡು  ಬದುಕನ್ನು ಸಾಗಿಸಬೇಕು. ನಾವು ಎಷ್ಟು ದಿನ ಬದುಕಿದ್ದೇವೆ ಅನ್ನುವದಕಿಂತ ಹೇಗೆ ಬದುಕಿದ್ದೇವೆ ಅನ್ನುವುದೇ ಬದುಕಿನ ಸಾರಾಂಶ.

ಹೀಗೆ ಪುಟ್ಟ ಪುಟ್ಟ ಸಂತೋಷಗಳು ನಮ್ಮ ಬದುಕನ್ನೇ ಸುಂದರವಾಗಿಸುತ್ತವೆ. ನಮ್ಮಲ್ಲಿ ಎಷ್ಟೇ ದುಡ್ಡಿದ್ದರೂ, ಎಷ್ಟೋ ಬಂಗಲೆ ,ಕಾರಿದ್ದರೂ ಈ ಪುಟ್ಟ ಸಂತೋಷಗಳನ್ನು ನಾವು ಅನುಭವಿಸದಿದ್ದರೆ ಬದುಕು ವ್ಯರ್ಥ ವಾದಂತೆ. ಅದಕ್ಕೆ ಯಾವುದೇ ಬೆಲೆ ಬರುವುದಿಲ್ಲ. ಇಂತಹ ಪುಟ್ಟ ಸಂತೋಷಗಳು ನಿಮ್ಮದಾಗಲಿ .

ಮೊನ್ನೆ ಕೋಕಾಕೋಲ ಅವರ  Coca-Cola International Day of Happiness http://CokeURL.com/96jnc.

ವಿಡಿಯೋ ನೋಡಿದ ಮೇಲೆ ನನಗೆ ಸಂತೋಷವೆಂದರೆ ಏನು ಎಂಬ ಸಣ್ಣ ಪ್ರಶ್ನೆ ಹುಟ್ಟಿಕೊಂಡಿತು. ಅದಕ್ಕೆ ಬರೆದ ಲೇಖನವಿದು. ನಿಮ್ಮ ಮೊಗದ ಮೇಲೆ ನಗುವು ಸದಾ ಇರಲಿ. ಆ ಪುಟ್ಟ ಪುಟ್ಟ ಸಂತೋಷಗಳು ನಿಮ್ಮನ್ನು ಸದಾ ಮಗುವಿನಂತೆ ಇಟ್ಟಿರಲಿ.





No comments:

Post a Comment