ಇಷ್ಟೆಲ್ಲಾ ಇದೆ ..

Monday, September 16, 2013

ಒಂಟಿತನ ಕಳೆದ ಮೇಲೆ

ಒಂಟಿತನ ಕಳೆದ ಮೇಲೆ

ಒಂಟಿಯಾಗಿದ್ದಾಗ ಹುಡುಗನಿಗೆ
 ಬೇಸಿಗೆಕಾಲ , ಚಳಿಗಾಲ
ಮಳೆಗಾಲ ಎಲ್ಲವೂ ಒಂದೇ ..
ಹುಡುಗಿ ಜೊತೆಗೆ ಇದ್ದರೆ..?
 'ಚಳಿಗಾಲ' ಒಂದೇ ..!

ಪ್ರೀತಿ ಪವರ್


ಪ್ರೀತಿ ಪವರ್
ತಿರುಗುವ ಭೂಮಿ ನಿಂತರೂ
ನನ್ನ ಪ್ರೀತಿ ನಿಲ್ಲಲ್ಲ
ಚಂದಿರನ ಬೆಳದಿಂಗಳು ಖಾಲಿಯಾದರೂ
ನಿನ್ನ ನೆನಪುಗಳ ಹೊತ್ತ ನನ್ನ ಹೃದಯ ಖಾಲಿಯಾಗಲ್ಲ..!

ನಮ್ಮ ಸರ್.ಎಂ .ವಿಶ್ವೇಶ್ವರಯ್ಯನವರು


ಮುದ್ದೇನಹಳ್ಳಿಯಲ್ಲಿ ಮುದ್ದೆ ತಿಂದು ಬೆಳೆದವರು
ಭಾರತದ ರತ್ನ ,ಕನ್ನಡದ ಹೆಮ್ಮೆಯ ಪುತ್ರರಿವರು
ಆಣೆಕಟ್ಟು ಕಟ್ಟಿಸಿ ,ಹೊಲ ಗದ್ದೆಗೆ ನೀರು ಹರಿಸಿ, ರೈತರ ದೇವರಾದವರು
ಕತ್ತಲೆ ನಾಡಿಗೆ ವಿದ್ಯುತ್ ಬೆಳಕನ್ನು ಹರಿಸಿ ಮೇಧಾವಿಯಾದವರು
ತಂತ್ರಜ್ಞಾನಕ್ಕೆ ಹೊಸ ಮಂತ್ರ ಹೇಳಿಕೊಟ್ಟರಿವರು
ದಿವಾನರಾದರೂ ಸರಳ ಮಾನವರರಂತೆ ಬದುಕಿ ಮಾದರಿಯಾದವರು
ಅವರೇ
ನಮ್ಮ ಸರ್.ಎಂ .ವಿಶ್ವೇಶ್ವರಯ್ಯನವರು
ಕರ್ನಾಟಕದ ಹೆಮ್ಮೆಯ ಅಭಿಯಂತರು .!

Sunday, September 15, 2013

ಆಘಾತ


ಆಘಾತ
ಮನೆಗೆ ಒಂದಿಬ್ಬರು
ಅತಿಥಿ ಬಂದರೆ - ಸ್ವಾಗತ
ಮೂರ್ನಾಲ್ಕು ಜನ ಬಂದರೆ - ಸುಸ್ವಾಗತ
ತಂಡ ತಂಡವಾಗಿ ಬಂದರೆ - 'ಆಘಾತ'

ಪ್ರೇಯಸಿ

ಪ್ರೇಯಸಿ
ನೀ ನಕ್ಕರೆ
ಮರುಭೂಮಿಯಲ್ಲಿ ಮಳೆಬಂದಂತೆ..
ನೀ ಅತ್ತರೆ
ಹೇಳದೇ ಬರುವ ಸುನಾಮಿಯಂತೆ .!

ನಗು -ಅಳು


ನಗು -ಅಳು
ಸದಾ ನಕ್ಕರೆ
ಸಂಕಟ ಮಾಯ
ಸದಾ ಅತ್ತರೆ
ನೆಂಟ ಮಾಯ

ಜನರ ಪ್ರತಿಕ್ರಿಯೆ

ಜನರ ಪ್ರತಿಕ್ರಿಯೆ

ಗೆದ್ದರೆ  ಬಲು ಕೇಕೆ
     ಸೋತರೆ ಬರೀ 'ಟೀಕೆ '..!

Friday, September 13, 2013

ಮಾಯಾ ಲೋಕ ..! (ಕನಸಿನಿಂದ .. ಕನಸುಗಳವರೆಗೆ !)


Courtesy :Google Images

ಮಾಯಾ ಲೋಕ ..!
(ಕನಸಿನಿಂದ ಕನಸುಗಳವರೆಗೆ )

ಆಕಾಶದಲ್ಲಿನ ನಕ್ಷತ್ರ ಎಣಿಸುತ್ತ
ಬೆಳದಿಂಗಳ ಬೆಳಕನ್ನು ಸವಿಯುತ್ತ
ಜೋಡಿಯಾದವು ನನ್ನ ಕಣ್ಣ ರೆಪ್ಪೆಗಳು
ಶುರುವಾದವು ಸಣ್ಣ ಕನಸುಗಳು

ಓಡುತ್ತಿದ್ದವು ಅಲ್ಲಿ ಜೋಡಿ ಕಾಲುಗಳು
ಅವೆರಡರ ಹಿಂದೆ ಮತ್ತೆರಡು ಕಾಲುಗಳು
ಬದುಕಿಗಾಗಿ ನಡೆವ ಓಟವದು
ಬದುಕಲೇಬೇಕೆಂಬ ಹಠವದು ..
ವೇಗದಿ ಓಡುತಿದೆ 'ಕಾಲ'ವು  ಮುಂದೆ
'ಮಾನವ'ನ ಸವಾರಿ ಅದರ ಹಿಂದೆ ..
 ಓಡುತ ಓಡುತ ಬಲು ಜೋರಾಗಿ ,
ಮಲಗಿಹನು ಮಾನವ ಸುಸ್ತಾಗಿ ..

ಅವನ ಕಣ್ಣಿನ ಪರದೆ ಮುಚ್ಚಿತು
 ಕನಸಿನ ಪರದೆ ತೆರೆಯಿತು .

ಶಾಂತವಾಗಿ ಹರಿಯುತ್ತಿದೆ ಬದುಕೇಂಬ ಸಾಗರ
ತೆಪ್ಪದಲ್ಲಿ ಚಲಿಸುತ್ತಿರುವನು ಒಬ್ಬನೇ  ಸವಾರ
ತೆಪ್ಪ ಸಣ್ಣದಿರಲಿ ದೊಡ್ಡದಿರಲಿ
ಕಪ್ಪಿರಲಿ ಬಿಳಿಯಿರಲಿ
ಆ ಯಾತ್ರೆಗೆ ಭಂಗವಿಲ್ಲ ..
ಇಲ್ಲ ಅಲ್ಲಿ  ಒತ್ತಡ , ಅವಸರ
'ಸಾಕು 'ಎನ್ನುವ ಬೇಸರ ..
ಆ ಯಾತ್ರೆ ಅಷ್ಟೊಂದು ಸುಂದರ
ಮೈ ಮರೆತು ಮಲಗಿದನು ಸವಾರ

ಕಾಲಿಟ್ಟನು ಅವನು ಕನಸಿನ ಲೋಕಕ್ಕೆ
ಸಿದ್ದನಾದನು ಮಾಯಾ ಓಟಕ್ಕೆ ..!

ಓಡುತ್ತಿದ್ದವು ಅಲ್ಲಿ ಜೋಡಿ ಕಾಲುಗಳು
ಅವೆರಡರ ಹಿಂದೆ ಮತ್ತೆರಡು ಕಾಲುಗಳು
ಬದುಕಿಗಾಗಿ ನಡೆವ ಓಟವದು
ಬದುಕಲೇಬೇಕೆಂಬ ಹಠವದು ..
ವೇಗದಿ ಓಡುತಿದೆ 'ಕಾಲ'ವು  ಮುಂದೆ
'ಮಾನವ'ನ ಸವಾರಿ ಅದರ ಹಿಂದೆ ..

ಆ ಸಾಗರದಿ , ಬಿರುಗಾಳಿ ಬೀಸಲು ಲಘುವಾಗಿ
ಬಂದ ಆ ಸವಾರ ಕನಸಿನ ಲೋಕದಿಂದ ಹಿಂದ್ತಿರುಗಿ .

ಬಡಿದೆಬ್ಬಿಸಿತು ಕಾಲವು
ಚಾಟಿಯೇಟು ಕೊಟ್ಟು
ಮತ್ತೆ ಅವನದು ಓಟವು
ಎಲ್ಲ ಕನಸವ ಬಿಟ್ಟು ..

ಚಂದ್ರ ಹೋಗಿದ್ದ
ಅವರಣ್ಣ ಬಂದಿದ್ದ ..
ಹಗಲು ಕಾಣುವ ನಕ್ಷತ್ರದಿಂದ 
ಹೊರಬಂದೆನು ನಾ ಆ ಕನಸಿನಿಂದ ..!















Wednesday, September 4, 2013

ಬಾಲಕಾರ್ಮಿಕರು ..!

Photo Courtesy : Google Images



     ಬಾಲಕಾರ್ಮಿಕರು ..!
 ಒಬ್ಬ ಬಾಲಕ
ಮುಗ್ದ ಮನಸ್ಸು ; ದೊಡ್ಡ ಕನಸು
ನೋಡಲು ಅವನು ತುಂಬಾ ಸೊಗಸು
ಅಕ್ಷರ ಕಟ್ಟಲು ಕನಸೊಂದ ಕಂಡಿದ್ದ
ಮನೆ ಕಟ್ಟುವ ಆಳಾಗಿ ದುಡಿಯುತಲಿದ್ದ ..!
 ಇನ್ನೊಬ್ಬ ಬಾಲಕ
ನೋಡಲು ತುಂಬಾ ಕೊಳಕ
ಪೆನ್ಸಿಲ್ ಹಿಡಿಬೇಕಾದವನು ,
ಪಂಕ್ಚರ್ ಅಂಗಡಿಲಿ ಟೈಯರ್ ಹಿಡಿಯುತಿರುವನು ..
 ಇಲ್ಲೊಬ್ಬ  ಬಾಲಕ
ಮಾತಡುವದರಲ್ಲಿ ತುಂಬಾ ಚಾಲಾಕ
ಸ್ಲೇಟು ನಲ್ಲಿ ಅಕ್ಷರ ಕಾಣಬೇಕಿದ್ದವನು,
ತೊಳೆಯುವ ಪ್ಲೇಟು ನಲ್ಲಿ ಭವಿಷ್ಯ ನೋಡುತಿರುವನು..
 ಅಲ್ಲೊಬ್ಬ ಬಾಲಕ
ಹಣೆಯ ಮೇಲೆ ಕೆಂಪು ತಿಲಕ
ಮನೆಯಲ್ಲಿ ವಾಸವಾಗಿರಬೇಕಾದವನು
ಮಠದಲ್ಲಿ ಯಾವದೋ ಗುರುವಿಗೆ ದಾಸನಾಗಿರುವನು ..
 ಕೊನೆಗೊಬ್ಬ ಬಾಲಕ
ಹಾಕಿರುವನು ಕನ್ನಡಕ
ಬರೆಯಬೇಕಿತ್ತು ಅವನು ಕೈಯಲ್ಲಿ ಹಿಡಿದು ಪೆನ್ನನ್ನು
ಸಂತೆಯಲ್ಲಿ ಮಾರುತ ನಿಂತಿಹನು  ಬಲೂನು
ಇವರೆಲ್ಲ ಬರೀ ಬಾಲಕರಲ್ಲ
ಬಾಲಕಾರ್ಮಿಕರು ..
 ಎಷ್ಟೇ ಇದ್ದರೂ ನಿಮ್ಮ ಹತ್ತಿರ MONEY
ಕೇಳಲಿ ನಿಮ್ಮ ಕಿವಿಗೂ ಬಾಲಕಾರ್ಮಿಕರ ಧ್ವನಿ...
 



 

Monday, September 2, 2013

ಬಡತನ !





ಬಡತನ !
ಮನೆ -ಚಿಕ್ಕ ಗುಡಿಸಲು
ಒಂದೇ ಬಾಗಿಲು ; ಗಾಳಿ ಬರಲು
ತಲಾ ಒಂದರಂತೆ ಬಟ್ಟೆ
ಊಟಕ್ಕೆ ಒಂದೇ ಒಂದು ತಟ್ಟೆ
ಕುಡಿಯುವದಕ್ಕೆ ನೀರಿಲ್ಲ
ಸ್ನಾನ .?ಕೇಳೋ ಹಾಗಿಲ್ಲ..

ಗೊಂಬೆಗಳನ್ನು ಮಾರೋದು ಅವರ ವ್ಯಾಪಾರ
ಗಂಡ -ಹೆಂಡತಿ ,ಇಬ್ಬರು ಮಕ್ಕಳು ಅಷ್ಟೇ  ಅವರ ಸಂಸಾರ  ..
ನಿರ್ಜೀವ ಗೊಂಬೆಗಳನ್ನು ಮಾರುವದಿಂದಲೇ
ನಾಲ್ಕು ಜೀವಗಳ ಊಟಕ್ಕೆ ಅಕ್ಕಿ- ಬೇಳೆ ..

ನೋವನ್ನು ನೋಡುವ ಕಣ್ಣುಗಳಲ್ಲಿಯೂ ಸಹಿತ
ನಡೆಯುತಲಿತ್ತು ಅಲ್ಲಿ ಕನಸುಗಳ ಕುಣಿತ
ಮಕ್ಕಳಿಗೆ ಅಕ್ಷರ ಕಲಿಸುವ ಅಮ್ಮನ ತವಕ
ಬೆವರು ಸುರಿಸಿ ದುಡಿಯೋದೆ ಅಪ್ಪನ ಕಾಯಕ

ರಾತ್ರಿಯಾದರೆ ಬೆಳದಿಂಗಳೇ ಗತಿ
ಇವರಿಗಿಲ್ಲ ವಿದ್ಯುತ್ ಬಿಲ್ ಕಟ್ಟುವ ಫಜೀತಿ .
ನಾಳೆಯ ಕನಸು ಹೊತ್ತು ಮಲಗುವರು
ನೋವಿನಲ್ಲೂ ನಲಿವ ಕಾಣುವರು








Sunday, September 1, 2013

ಇಬ್ಬನಿಯ ಹನಿ..!

Photo Courtesy : Google images


ಮುಂಜಾನೆಯ ಇಬ್ಬನಿಯ ಹನಿಯೊಂದು 
ನನ್ನ ಸ್ಪರ್ಶಿಸಿ ಕೇಳಿತು 
ರಾತ್ರಿಯ ಕನಸು ಹೇಗಿತ್ತು ..?

ರಾತ್ರಿ ಸುರಿದ ಕನಸಿನ ಮಳೆಗೆ 
ಹೃದಯ ತುಂಬಾ ನೆನೆದಿತ್ತು ..
ಮನದಿ ಬೀಸಿದ ತಂಗಾಳಿಯಲ್ಲಿ 
ಅವಳ ಹೆಸರು ತೇಲುತ್ತಿತ್ತು ..

ಚಂದಿರನ ಬೆಳದಿಂಗಳಿಗಿಂತ 
ಅವಳ ಕಣ್ಣುಗಳಲ್ಲಿ ಬೆಳಕಿತ್ತು ..
ಅವಳನ್ನೇ ನೋಡುವ ತವಕದಲ್ಲಿ 
ನನ್ನ ಹೃದಯ ಜಾರುತ್ತಿತ್ತು ..