ಇಷ್ಟೆಲ್ಲಾ ಇದೆ ..

Tuesday, July 9, 2013

ಮಳೆಯಲಿ ಜೊತೆಯಲಿ ...


ಮಳೆಯಲಿ ಜೊತೆಯಲಿ 


ನಡೆವಾಗ ಮಳೆಯಲಿ ಜೊತೆಯಲಿ 
ನಾವಿಬ್ಬರು ಒಂದೇ ಕೊಡೆಯಲಿ..
ಬೇರೇನೂ ಬೇಡ ನನಗೆ ಈ ಧರೆಯಲಿ..

ನಡೆಯುತಿರಲಿ ಕನಸಲಿ ಮನಸಲಿ
ನಿನ್ನ ಒಲವಿನ ಸುಂದರ ದಾಳಿ 
ಹೋಗುವೆ ನಾ ನಿನ್ನ ನೆನಪಿನ ಅಲೆಯಲ್ಲಿ ತೇಲಿ ..!

ದಿನವೂ ಬೀಳಬೇಕು ನನಗೆ 
ಬರೀ ನಿನ್ನದೇ ಕನಸು 
ಆ ಸ್ವಪ್ನದಲ್ಲಿಯೂ ನಿನ್ನ
ನಗುವಿನ ನದಿಯನ್ನೇ ಹರಿಸು...

ನಿನ್ನ ಪುಟ್ಟ ಹೃದಯದಿ ಬರಲು 
ನನಗೆ ಆಹ್ಹ್ವಾನ ಕಳುಹಿಸು 
ಮಾತನಾಡದೆ ಎಲ್ಲಾ ಹೇಳುವ 
ನಿನ್ನ ಮೌನ ನನಗೂ ಕಲಿಸು...

ನನ್ನನ್ನು ಪ್ರೀತಿಸುವ ಮುನ್ನ 
ನೂರು ಬಾರಿ ನೀ ಯೋಚಿಸು 
ಆ ಪ್ರತಿ ಯೋಚನೆಯಲ್ಲೂ 
ನನ್ನ ಹೆಸರನ್ನೇ ನೀ ನೆನೆಸು ... 

No comments:

Post a Comment