ಇಷ್ಟೆಲ್ಲಾ ಇದೆ ..

Saturday, December 7, 2013

ನಿಶ್ಚಿತ



ನಿಶ್ಚಿತ 

ಹುಟ್ಟು ಉಚಿತ 
ಸಾವು ಖಚಿತ 
ಹುಟ್ಟು ಸಾವುಗಳ ಮಧ್ಯ 
ನಮ್ಮ ಜೀವನ 
ಸುಖ- ದು:ಖಗಳ ಮಿಶ್ರಿತ ...

ನಿನ್ನೆ ಎಂಬುದು 'ನೆನಪು' 
ನಾಳೆ ಎಂಬುದು 'ಕನಸು '
ಇಂದು ಎಂಬುದು ಮಾತ್ರ ' ಸತ್ಯ '
ಸತ್ಯ ನಿಶ್ಚಿತ ... ನಿಶ್ಚಿತ..





ಪ್ರೇಮ ಗೀತೆ


ಪ್ರೇಮ ಗೀತೆ...! 
ಹಿಡಿದಿವೆ ಕನಸುಗಳು ಮಸಣದ ದಾರಿ 
ಕಟ್ಟುವೆ ನಿನ್ನೆಲ್ಲಾ ನೆನಪುಗಳಿಗೆ ಗೋರಿ 
ಅದರಲ್ಲೂ ಬಾರಿಸುವೆ ಒಂದಿಷ್ಟು ಸೆಂಚೂರಿ 
ನಡಗುವ ಚಳಿಯಲ್ಲೂ ,ಹೃದಯದಲ್ಲೀಗ ಸುಡುವ ಉರಿ ..

ಹೃದಯದ ಮಿಡಿತದಿಂದಲೇ ಹೊಸದೊಂದು ಸಂಗೀತ 
ಪ್ರತಿ ಸಾಲಿನಲ್ಲಿ ನಿನ್ನ ವರ್ಣನೆಯೇ ಅದರ ಇಂಗಿತ 
ನಿಂತಿದೆ ನನ್ನ ಹೃದಯ , ನಿನ್ನ ಧ್ವನಿಗೆ ಕಾಯುತ 
ಯುಗಗಳೇ ಕಳೆದರೂ ನಮ್ಮ 'ಪ್ರೇಮ ಗೀತೆ ' ಶಾಶ್ವತ ..!









ಜನರ ಪ್ರತಿಕ್ರಿಯೆ


ಜನರ ಪ್ರತಿಕ್ರಿಯೆ 

ಗೆದ್ದರೆ ಬಲು ಕೇಕೆ 
     ಸೋತರೆ ಬರೀ 'ಟೀಕೆ '..!

ನಗುವಿರಲಿ !

ನಗುವಿರಲಿ ! 
ನಿಮ್ಮ ತುಟಿಯ ಮೇಲೆ ಸದಾ ನಗುವಿರಲಿ
        ಆ ನಗು ಮೊತ್ತಬ್ಬರ ಕಣ್ಣಲ್ಲಿ ನೀರು ತರದಿರಲಿ 

Wednesday, November 13, 2013

ಕೇಳೋ ಮಂಕುತಿಮ್ಮ ಕೇಳು !


ಕೇಳೋ ಮಂಕುತಿಮ್ಮ ಕೇಳು
ಹುಟ್ಟು ಸಾವಿನ ಅಂತರ ನೀ ಕೇಳು
ಹುಟ್ಟು ಒಂದು ಗೆರೆ
ಸಾವು ಒಂದು ಗೆರೆ
ಅವರೆಡರ ನಡುವೆ ಮೂಡಿಸುವ ಬರಹಗಳೇ ನಮ್ಮ ಬದುಕು !

ಕೇಳೋ ಮಂಕುತಿಮ್ಮ ಕೇಳು
ಮೂರು ದಿನದ ಆಟ ಬಾಳು
ಗೆಲವು ಸೋಲಿನ ಹೋರಾಟ
ನೋವು ನಲಿವುಗಳ ಮಾರಾಟ
ಏನೆಯಾದರೂ ನಿಲ್ಲದು 'ಓಟ' ಬದುಕು

ಕೇಳೋ ಮಂಕುತಿಮ್ಮ ಕೇಳು
ಕನಸುಗಳ ಮಳಿಗೆಯಿಂದ ನೀ ಏಳು
ನಿನ್ನೆಲ್ಲಾ ಕನಸುಗಳು ನನಸಾಗದು
ಆದರೂ ನಿನ್ನ ಪ್ರಯತ್ನ ನಿಲ್ಲಬಾರದು
ಒಂದು ಸುಂದರ ಕನಸು - ನಮ್ಮ ಬದುಕು

ಕೇಳೋ ಮಂಕುತಿಮ್ಮ ಕೇಳು
ಜಾತ್ರೆಯ ಹಾಗೆ ನಮ್ಮ ಬಾಳು
ನೀನೇನೆ ಇಲ್ಲಿ  ಕೊಂಡರೂ
ನಿನ್ನನ್ನೇ ನೀ ಮಾರಿಕೊಂಡರೂ
ನಿನ್ನ ಗಳಿಕೆ ಇಲ್ಲಿ ಶೂನ್ಯ

ಶೂನ್ಯವನ್ನು ಶೋಧಿಸುವುದೇ  ನಮ್ಮ ಬದುಕು !


Sunday, November 3, 2013

ನಾವು ಕನ್ನಡಿಗರು


ನಾವು ಕನ್ನಡಿಗರು 
ಬಾಯಿ ಹೊಲದ್ರು ಮೂಗಲ್ಲಿ ಮಾತಡ್ತಿವಿ ಕನ್ನಡ ಭಾಷೆ
ಎಷ್ಟೇ ಮಾತಾಡಿದ್ರು ತಿರೋದಿಲ್ಲ ಭಾಷೆಯ ತೃಷೆ
ಇಲ್ಲಿ ಹುಟ್ಟುವುದೇ ಪುಣ್ಯ ; ಸ್ವರ್ಗದ ಹಾಗೆ ಕರುನಾಡು

ಮಣ್ಣಿನ ಕಣಕಣದಲ್ಲೂ ಕೇಳುತಿದೆ ಕಸ್ತೂರಿ ಕನ್ನಡದ ಹಾಡು

Saturday, November 2, 2013

ದೀಪಾವಳಿ

ದೀಪಾವಳಿ'

ಮನೆಯ ದೀಪ ಹಚ್ಚುವುದು ದೈನಂದಿನ ದೃಶ್ಯಾವಳಿ
ಮನದ ದೀಪ ಹಚ್ಚುವುದೇ ನಿಜವಾದ 'ದೀಪಾವಳಿ'
ಮನೆಯ ಹಾಗು ಮನದ ದೀಪಗಳೇರಡು ಹಚ್ಚೋಣ
ಎಲ್ಲ ಜೀವಕುಲದ ಬಾಳಿಗೆ ಬೆಳಕು ಚೆಲ್ಲೋಣ..