ಇಷ್ಟೆಲ್ಲಾ ಇದೆ ..

Friday, September 13, 2013

ಮಾಯಾ ಲೋಕ ..! (ಕನಸಿನಿಂದ .. ಕನಸುಗಳವರೆಗೆ !)


Courtesy :Google Images

ಮಾಯಾ ಲೋಕ ..!
(ಕನಸಿನಿಂದ ಕನಸುಗಳವರೆಗೆ )

ಆಕಾಶದಲ್ಲಿನ ನಕ್ಷತ್ರ ಎಣಿಸುತ್ತ
ಬೆಳದಿಂಗಳ ಬೆಳಕನ್ನು ಸವಿಯುತ್ತ
ಜೋಡಿಯಾದವು ನನ್ನ ಕಣ್ಣ ರೆಪ್ಪೆಗಳು
ಶುರುವಾದವು ಸಣ್ಣ ಕನಸುಗಳು

ಓಡುತ್ತಿದ್ದವು ಅಲ್ಲಿ ಜೋಡಿ ಕಾಲುಗಳು
ಅವೆರಡರ ಹಿಂದೆ ಮತ್ತೆರಡು ಕಾಲುಗಳು
ಬದುಕಿಗಾಗಿ ನಡೆವ ಓಟವದು
ಬದುಕಲೇಬೇಕೆಂಬ ಹಠವದು ..
ವೇಗದಿ ಓಡುತಿದೆ 'ಕಾಲ'ವು  ಮುಂದೆ
'ಮಾನವ'ನ ಸವಾರಿ ಅದರ ಹಿಂದೆ ..
 ಓಡುತ ಓಡುತ ಬಲು ಜೋರಾಗಿ ,
ಮಲಗಿಹನು ಮಾನವ ಸುಸ್ತಾಗಿ ..

ಅವನ ಕಣ್ಣಿನ ಪರದೆ ಮುಚ್ಚಿತು
 ಕನಸಿನ ಪರದೆ ತೆರೆಯಿತು .

ಶಾಂತವಾಗಿ ಹರಿಯುತ್ತಿದೆ ಬದುಕೇಂಬ ಸಾಗರ
ತೆಪ್ಪದಲ್ಲಿ ಚಲಿಸುತ್ತಿರುವನು ಒಬ್ಬನೇ  ಸವಾರ
ತೆಪ್ಪ ಸಣ್ಣದಿರಲಿ ದೊಡ್ಡದಿರಲಿ
ಕಪ್ಪಿರಲಿ ಬಿಳಿಯಿರಲಿ
ಆ ಯಾತ್ರೆಗೆ ಭಂಗವಿಲ್ಲ ..
ಇಲ್ಲ ಅಲ್ಲಿ  ಒತ್ತಡ , ಅವಸರ
'ಸಾಕು 'ಎನ್ನುವ ಬೇಸರ ..
ಆ ಯಾತ್ರೆ ಅಷ್ಟೊಂದು ಸುಂದರ
ಮೈ ಮರೆತು ಮಲಗಿದನು ಸವಾರ

ಕಾಲಿಟ್ಟನು ಅವನು ಕನಸಿನ ಲೋಕಕ್ಕೆ
ಸಿದ್ದನಾದನು ಮಾಯಾ ಓಟಕ್ಕೆ ..!

ಓಡುತ್ತಿದ್ದವು ಅಲ್ಲಿ ಜೋಡಿ ಕಾಲುಗಳು
ಅವೆರಡರ ಹಿಂದೆ ಮತ್ತೆರಡು ಕಾಲುಗಳು
ಬದುಕಿಗಾಗಿ ನಡೆವ ಓಟವದು
ಬದುಕಲೇಬೇಕೆಂಬ ಹಠವದು ..
ವೇಗದಿ ಓಡುತಿದೆ 'ಕಾಲ'ವು  ಮುಂದೆ
'ಮಾನವ'ನ ಸವಾರಿ ಅದರ ಹಿಂದೆ ..

ಆ ಸಾಗರದಿ , ಬಿರುಗಾಳಿ ಬೀಸಲು ಲಘುವಾಗಿ
ಬಂದ ಆ ಸವಾರ ಕನಸಿನ ಲೋಕದಿಂದ ಹಿಂದ್ತಿರುಗಿ .

ಬಡಿದೆಬ್ಬಿಸಿತು ಕಾಲವು
ಚಾಟಿಯೇಟು ಕೊಟ್ಟು
ಮತ್ತೆ ಅವನದು ಓಟವು
ಎಲ್ಲ ಕನಸವ ಬಿಟ್ಟು ..

ಚಂದ್ರ ಹೋಗಿದ್ದ
ಅವರಣ್ಣ ಬಂದಿದ್ದ ..
ಹಗಲು ಕಾಣುವ ನಕ್ಷತ್ರದಿಂದ 
ಹೊರಬಂದೆನು ನಾ ಆ ಕನಸಿನಿಂದ ..!















No comments:

Post a Comment