ಇಷ್ಟೆಲ್ಲಾ ಇದೆ ..

Sunday, August 25, 2013

ಒಂದು ಹೆಣ್ಣಿನ ಕಥೆ ...!



ಒಂದು ಹೆಣ್ಣಿನ ಕಥೆ ...!

ತಡವಾದರೂ ಕಂಕಣ ಭಾಗ್ಯ ಕೂಡಿಬಂದಿತ್ತು.
ಹುಡುಗಿಯ ಮನದಲ್ಲಿ ವೈರಾಗ್ಯ ದೂರಹೂಗಿತ್ತು
ಹೆತ್ತು ಹೊತ್ತು ಬೆಳಸಿದ ಹೆತ್ತವರು ಒಂದೆಡೆ
ಒಂದೇ ರಕ್ತ ಹಂಚಿಕೊಂಡು ಬೆಳೆದವರು ಇನ್ನೊಂದೆಡೆ
ಬೆಳೆದು  ಬಂದ ಮನೆಯ  ಋಣ  ಮುಗಿದಿತ್ತು
ಎಲ್ಲ ಬಿಟ್ಟು ಹೋಗಬೇಕೆಂದು  ಆ ಮೂಗ್ದ ಮನ ನೊಂದಿತ್ತು
ತನ್ನ ಮದುವೆಯಿಂದ  ಹೆತ್ತವರಿಗೆ ಹೊರೆ ಕಡಿಮೆ ಎಂದು
ಹೇಳಿತ್ತು ಅವಳ ಹೃದಯ ಬಲು ನೊಂದು ..
ಕೈ ಹಿಡಿಯುವ ಹುಡುಗನ ಬಗ್ಗೆ ಏನೇನೋ ವಿಚಾರ
ಕನಸಲ್ಲಿಯೂ ಕಾಡುತಲಿತ್ತು ಅವಳನ್ನು ಯಾವುದೋ ಅವತಾರ

ನಡದೇ ಹೋಯಿತು ಮೂರು ಗಂಟು ಕಟ್ಟುವ ಕೆಲಸ
ಅವಳಿಗೆ ಇನ್ನು ಹೊಸ ಅಡುಗೆ ಮನೆಯ ಸಹವಾಸ
ಹುಡುಗನ ಮನೆಯ ಹೊಸ್ತಿಲು ರಂಗು ಪಡೆದಿತ್ತು
ಹೊಸ ಸೊಸೆಯ ಪೂಜೆ ಅದಕ್ಕೆ ಒಲಿದಿತ್ತು
ಕತ್ತೆ ಎಂತ ಅತ್ತೆ .ದೆವ್ವದಂತ ಮಾವ , ಖ್ಯಾರೆ ಅನ್ನದ ಪತಿ
ಅಳುವ ಕಣ್ಣಿಗೆ ಒರೆಸುವ ಕೈ ಸಿಗದಂತಾಗಿತ್ತು ಅವಳ ಸ್ಥಿತಿ
ಓಡಿ ಹೋಗಬೇಕೆನ್ನುತ್ತಿತು ಅವಳ ಮನ, ಚುಚ್ಚು ಮಾತು ಕೇಳಿ
ಓಡುವ ಕಾಲುಗಳನ್ನು ತಡೆದಿತ್ತು ಕತ್ತಿನಲ್ಲಿರುವ ಅವಳ ತಾಳಿ
ಮೂರು ಗಂಟು ಬಿದ್ದು ಮೂರು ವರ್ಷವಾದರೂ ಅವಳಾಗಲಿಲ್ಲ ತಾಯಿ
ಅವಳಿಗೆ ಹೇಗೆತಾನೆ ಆದೀತು ಮುಚ್ಚಲು  ಊರ ಜನರ ಕೊಂಕು ಬಾಯಿ ..?
ಅವಳ ವ್ರತವೋ ದೇವರ ವರವೋ  ಹೆಣ್ಣು  ಮಗು ಹುಟ್ಟಿತು 
ಬರಿ ನೋವಿನಲ್ಲಿದ್ದ ಅವಳ ತಾಯ್ತನ ಸತ್ತು ಬದುಕಿತ್ತು
ಕಟು ವಿಧಿಯ ಆಟ ಮತ್ತೆ ಶುರುವಾಗಿತ್ತು ,
ಹುಟ್ಟಿ ಒಂದೇ ವಾರದಲ್ಲಿ ಮಗು ಮಸಣ ಸೇರಿತ್ತು ..!
ಸಾವಿನಂತ ನೋವಿಗೆ ತಾಯಿಯ ಕರಳು ಸುಟ್ಟು ಹೋಗಿತ್ತು
ಬದುಕಲು ಉಳಿದಿದ್ದ ಒಂದೇ ಒಂದು ಎಳೆ ಕಳೆದುಹೋಗಿತ್ತು ...


ದಿನ ಸಾಯುವ ಬದಲು ,ಕೊನೆ ಸಾವನ್ನು ನೋಡಲು
ಅವತನಿಸುತಿತ್ತು ಅವಳ ಮನದ ಅಳಲು
ಕೊನೆಗೂ ಕೊನೆಯ ಉಸಿರು ಬಿಟ್ಟಳು  ಆ ಹೆಣ್ಣು
ಸತ್ತಾಗಲು ಅಳುತಲಿತ್ತು ಅವಳ ಕಣ್ಣು ..!
......................!!...............................!......................................!...........................................!
ಒಂದು ಹೆಣ್ಣು ಬಡತನವಿದ್ದರೂ ಬಾಳುವಳು ;
ಆದರೆ ತಾಯ್ತನ ಸಿಗದಿದ್ದರೆ ಬದುಕಲು ಇಚ್ಚಿಸಿಲಾರಲು ..


No comments:

Post a Comment